ಯುವಕ ಆತ್ಮಹತ್ಯೆ: ಕುಟುಂಬದ ಸರಣಿ ದುರಂತ
Saturday, November 22, 2025
ಪುತ್ತೂರು: ಬೆಂಗಳೂರಿನ ಶೋರೂಮ್ ಒಂದರಲ್ಲಿ ಉದ್ಯೋಗದಲ್ಲಿದ್ದ ಯುವಕನೋರ್ವ ಪುತ್ತೂರಿನ ಪುರುಷರಕಟ್ಟೆಯ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಮಡ ಘಟನೆ ಶುಕ್ರವಾರ ನಡೆದಿದೆ. ಇದರೊಂದಿಗೆ ಈ ಕುಟುಂಬದ ತಂದೆ ತಾಯಿ ಹಾಗೂ ಮಗ ಮೂವರ ಆತ್ಮಹತ್ಯೆ ಸರಣಿ ದುರಂತ ನಡೆದಿದೆ.
ಪುರುಷರಕಟ್ಟೆ ನಿವಾಸಿ ದಿ.ಪ್ರವೀಣ್ ಜೋಗಿ ಅವರ ಪುತ್ರ ಪ್ರತೀಕ್ (23) ಇದೀಗ ಆತ್ಮಹತ್ಯೆ ಮಾಡಿಕೊಂಡ ಯುವಕ. ಈ ಹಿಂದೆ ಆತನ ತಂದೆ ಪ್ರವೀಣ್ ಜೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಆತನ ತಾಯಿ ಕಾವ್ಯ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನಾ ವಿವರ:
ಬೆಂಗಳೂರಿನಿಂದ ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ಪ್ರತೀಕ್ ಮೊಬೈಲ್ ನೋಡುತ್ತಾ ಇದ್ದವರು ಮನೆಯ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರ ಚಿಕ್ಕಪ್ಪ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಸಹೋದರಿಯನ್ನು ಅಗಲಿದ್ದಾರೆ.