400 ಕೆ.ವಿ. ವಿದ್ಯುತ್ ಲೈನ್ ನಿಂದ ಕೃಷಿ ನಾಶ: ಕಾಂಗ್ರೆಸ್ ನಿಂದ ಪ್ರತಿಭಟನೆಯ ಎಚ್ಚರಿಕೆ
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರನ್ನು ನಿರ್ಲಕ್ಷಿಸಿ ಸಿಇಎ ವಿದ್ಯುತ್ ಕಾಯ್ದೆಯನ್ನು ಉಲ್ಲಂಘಿಸಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಇದು ಕೇಂದ್ರ ಸರಕಾರದ ದ್ವಿಮುಖ ನೀತಿಯಲ್ಲವೇ..?
ರೈತರ ಪ್ರತಿಭಟನೆಯ ಹೊರತಾಗಿಯು ಈ ಯೋಜನೆಯನ್ನು ತ್ವರಿತವಾಗಿ ಕಾರ‍್ಯಗತಗೊಳಿಸಲು ಕೇಂದ್ರ ಸರಕಾರ ಇಲಾಖೆಗೆ ಒತ್ತಡ ಹೇರುತ್ತಿದೆ. ಪ್ರಧಾನ ಮಂತ್ರಿ ಕಚೇರಿಯಿಂದ ತಿಂಗಳಿಗೆರಡು ಬಾರಿ ಸಹಾಯಕ ಆಯುಕ್ತರ ಕಚೇರಿಗೆ ಕರೆ ಮಾಡಿ ಯೋಜನೆಯ ಪ್ರಗತಿಯ ವಿವರವನ್ನು ಪಡೆಯುತ್ತಿದೆ. ಆದರೆ ರೈತರ ನೋವಿಗೆ ಸ್ಪಂದಿಸುತ್ತಿಲ್ಲ. ರೈತರಿಗೆ ನೀಡುವ ಪರಿಹಾರ ಮೊತ್ತದಲ್ಲೂ ಕಂಪೆನಿ ತಾರತಮ್ಯ ಎಸಗಿದೆ ಎಂದರು.
ಈ ಯೋಜನೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ನಡೆಯುತ್ತಿದ್ದರು ಭಾರತೀಯ ಕಿಸಾನ್ ಸಂಘ ರಾಜ್ಯ ಸರ್ಕಾರವನ್ನು ಬೊಟ್ಟು ಮಾಡಿ ಪ್ರತಿಭಟನೆ ಮಾಡಿ ರೈತರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿದರು. ಯೋಜನೆ ವಿರುದ್ಧ ರೈತರ ಜತೆ ಎಲ್ಲಾ ಪಕ್ಷದವರು ಕೈಜೋಡಿಸಬೇಕು.
ಭಾರತೀಯ ಕಿಸಾನ್ ಮೋಚಾ೯ದವರು ಕೇಂದ್ರ ಸರಕಾರದ ವಿರುದ್ಧ ಹೋರಾಟ ಮಾಡಬೇಕು, ಲೋಕಸಭಾ ಸದಸ್ಯರ ಮೂಲಕ ಕೇಂದ್ರಕ್ಕೆ ಒತ್ತಡ ಹೇರಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮಿಥುನ್ ರೈ, ಎಂಎಲ್ ಸಿ ಐವನ್ ಡಿ'ಸೋಜಾ ಅವರೊಂದಿಗೆ ಕೃಷಿ ನಾಶವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಂದ ಅಹವಾಲುಗಳನ್ನು ಸ್ವೀಕರಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.
ವಕೀಲ ಮರ್ವಿನ್ ಲೋಬೊ, ಕೃಷಿಕರಾದ ಲಿಯೋ ವಾಲ್ಟರ್ ನಝರತ್, ತುಕ್ರಪ್ಪ ಕೆಂಬಾರೆ, ರಾಜೇಶ್ ಡಿಕೋಸ್ತಾ ಮತ್ತು ಜೀವನ್ ಕ್ರಾಸ್ತಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
