ಶಿತಾ೯ಡಿ ಗ್ರಾ.ಪಂನಿಂದ ಮೂಡುಕೊಣಾಜೆ ಕುದ್ರೈಲು ಮುಗ್ಗೇರ್ಕಳ ದೈವಸ್ಥಾನಕ್ಕೆ 65 ಸಾವಿರ ರೂ. ಚೆಕ್ ಹಸ್ತಾಂತರ
Monday, November 17, 2025
ಮೂಡುಬಿದಿರೆ: ಮೂಡುಕೊಣಾಜೆ ಕುದ್ರೈಲು ಮುಗ್ಗೇರ್ಕಳ ದೈವಸ್ಥಾನಕ್ಕೆ ಜೀರ್ಣೋದ್ಧಾರ ಪ್ರಕ್ರಿಯೆ ಸಂದರ್ಭ ನೀಡಿದ ಭರವಸೆಯಂತೆ ಶಿರ್ತಾಡಿ ಗ್ರಾಮ ಪಂಚಾಯತ್ ಮೂಲಕ ಅಭಿವೃದ್ಧಿ ಕೆಲಸಕ್ಕಾಗಿ 15ನೇ ಹಣಕಾಸು ಯೋಜನೆಯಡಿ ಸುಮಾರು 65 ಸಾವಿರ ರೂ. ಮೊತ್ತದ ಚೆಕ್ಕನ್ನು ಹಸ್ತಾಂತರಿಸಲಾಯಿತು.
ಪಂಚಾಯತ್ ಸದಸ್ಯರಾದ ದಿನೇಶ್ ಶೆಟ್ಟಿ ತಿಮಾರ್, ಸಂತೋಷ್ ಶೆಟ್ಟಿ, ನಾಗವೇಣಿ, ಮಾಜಿ ಸದಸ್ಯ ಸುಕೇಶ್ ಶೆಟ್ಟಿ ಎದಮೇರು, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಚಿನ್ ಹೆಗ್ಡೆ, ಗುರಿಕಾರರು ಉಪಸ್ಥಿತರಿದ್ದರು.