ದಶಮದ ಸಂಭ್ರಮದಲ್ಲಿ ಮೂಡುಬಿದಿರೆಯ "ಶ್ರೀ ಯಕ್ಷನಿಧಿ": ನ.8ರಂದು ಯಕ್ಷ ಕಲಾವಿದ ವೇಣೂರು ಅಶೋಕ್ ಆಚಾಯ೯ರಿಗೆ "ಶ್ರೀ ಯಕ್ಷನಿಧಿ ಪ್ರಶಸ್ತಿ-2025" ಪ್ರದಾನ

ದಶಮದ ಸಂಭ್ರಮದಲ್ಲಿ ಮೂಡುಬಿದಿರೆಯ "ಶ್ರೀ ಯಕ್ಷನಿಧಿ": ನ.8ರಂದು ಯಕ್ಷ ಕಲಾವಿದ ವೇಣೂರು ಅಶೋಕ್ ಆಚಾಯ೯ರಿಗೆ "ಶ್ರೀ ಯಕ್ಷನಿಧಿ ಪ್ರಶಸ್ತಿ-2025" ಪ್ರದಾನ


ಮೂಡುಬಿದಿರೆ: ಯಕ್ಷಗಾನ ಶಿಕ್ಷಣ ಸಂಸ್ಥೆ ಹಾಗೂ ಯುವ ಮೇಳ ಶ್ರೀ ಯಕ್ಷನಿಧಿ  ಮೂಡುಬಿದಿರೆ (ರಿ.) ಸಂಸ್ಥೆಯು ದಶಮ ಸಂಭ್ರಮವನ್ನು ಆಚರಿಸುತ್ತಿದ್ದು ಈ ನಿಟ್ಟಿನಲ್ಲಿ  ನ. 8ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ದಿನವಿಡೀ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಈ ವಷ೯ "ಶ್ರಿ ಯಕ್ಷನಿಧಿ ಪ್ರಶಸ್ತಿ-2025"ನ್ನು ಯಕ್ಷಗಾನ ಕಲಾವಿದ ಕಟೀಲು ಮೇಳದ  ಅಶೋಕ್ ಆಚಾಯ೯ ವೇಣೂರು ಅವರಿಗೆ ಪ್ರದಾನ ಎಂದು  ಯಕ್ಷನಿಧಿಯ ಸ್ಥಾಪಕಾಧ್ಯಕ್ಷ, ಯಕ್ಷಗುರು ಶಿವ ಕುಮಾರ್ ಗುರುವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಭಾ ಕಾರ್ಯಕ್ರಮವು ಬೆಳಗ್ಗೆ 11.00 ಗಂಟೆಗೆ ಆರಂಭಗೊಳ್ಳಲಿದ್ದು,  ಧನಲಕ್ಷ್ಮೀ ಕ್ಯಾಶ್ ಇಂಡಸ್ಟ್ರೀಸ್‌ನ ಶ್ರೀಪತಿ ಭಟ್ ಅವರು ಅಧ್ಯಕ್ಷತೆಯಲ್ಲಿ ಶ್ರೀ ಮುಕ್ತಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕರಿಂಜೆ ಆಶೀರ್ವಚನ ನೀಡಲಿರುವರು. ಶಾಸಕ ಉಮನಾಥ ಎ. ಕೋಟ್ಯಾನ್

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮಾಜಿ‌ ಸಚಿವ ಕೆ. ಅಭಯಚಂದ್ರ ಜೈನ್ , ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬಿಜೆಪಿ ಮುಖಂಡ ಸುದರ್ಶನ್ ಎಂ., ಕಟೀಲು ಮೇಳದ‌ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ  ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸನ್ಮಾನ, ಗೌರವಾರ್ಪಣೆ:

ಸಂಸ್ಥೆಯು ಯಕ್ಷಗಾನ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಿದೆ.  ಶ್ರೀಪತಿ ಭಟ್, ರಾಮಚಂದ್ರ ಆಚಾರ್ಯ, ಡಾ. ಪ್ರಭಾತ್ ಬಲ್ನಾಡ್, ಗಣೇಶ್ ನಾರಾಯಣ ಪಂಡಿತ್ ಅವರನ್ನು ಸನ್ಮಾನಿಸಲಾಗುವುದು. ದಿವಾಕರ ದಾಸ್,  ಬಾಲಕೃಷ್ಣ ಭಟ್,  ರಾಜಾರಾಮ್, ಶ್ರೀಮತಿ ಲತಾ ಸುರೇಶ್, ನರೇಶ್ ಶೆಟ್ಟಿ, ವಿದೂಷಿ  ಸುಖದಾ ಬರ್ವೆಸೇರಿದಂತೆ ಹಲವಾರು ಸಾಧಕರನ್ನು ಗೌರವಿಸಲಾಗುವುದು. ಗಗನ್ ಕೆ. ಪೂಜಾರಿ, ನಿತಿನ್ ಪೆರಾರ, ಧನುಷ್ ಶೆಟ್ಟಿ, ತನುಷ್ ಶೆಟ್ಟಿ, ಯುಕ್ತ ಎಸ್. ರಾವ್, ರಿತಿಕಾ ಸುವರ್ಣ, ಅಕ್ಷತಾ ಕುಲಾಲ್, ಆಯುಷ್ ಶೆಟ್ಟಿ ಸೇರಿದಂತೆ ಸಂಸ್ಥೆಯ ಹಲವಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು.

ಸಂಸ್ಥೆಯ ವಿದ್ಯಾರ್ಥಿ ಕಲಾವಿದರಿಂದ  ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ. ಬೆಳಗ್ಗೆ 7.30ಕ್ಕೆ-ಚೌಕಿ ಪೂಜೆ, ಬೆಳಗ್ಗೆ 7.35 ರಿಂದ 8.20,  ಪೂರ್ವರಂಗ  ಸಂಸ್ಥೆಯ ವಿದ್ಯಾರ್ಥಿಗಳಿಂದ  ಶ್ರೀನಿವಾಸ ಬಳ್ಳಮಂಜ, ಕಟೀಲು ಮೇಳ ಮಾರ್ಗದರ್ಶನ ನಿಡಬೇಕು.

ರಂಗಸ್ಥಳವನ್ನು  ಜ್ಯೋತಿಷಿ ಡಾ. ಸುಧಾಕರ ತಂತ್ರಿ ಉದ್ಘಾಟಿಸುವರು.

ಬೆಳಗ್ಗೆ 9.00 ರಿಂದ 11.00ಯವರೆಗೆ‌ ಸಂಸ್ಥೆಯ ವಿದ್ಯಾರ್ಥಿ ಕಲಾವಿದರಿಂದ ಹೈಮಾವತಿ ಯಕ್ಷಗಾನ ಹಾಗೂ ಮಧ್ಯಾಹ್ನ 1.30 ರಿಂದ 4.00 ವಿದ್ಯುನ್ಮತಿ  ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಂಜೆ 4.15 ರಿಂದ 6.45  ಪದ್ಮಾವತಿ ಯಕ್ಷಗಾನ ನಡೆಯಲಿದೆ. ರಾತ್ರಿ 7.00 ರಿಂದ 10.30 ಚಂದ್ರಮತಿ ಯಕ್ಷಗಾನ ನಡೆಯಲಿದೆ ಎಂದು ಶಿವ‌ಕುಮಾರ್ ತಿಳಿಸಿದರು.

ಸಂಸ್ಥೆಯ ಅಧ್ಯಕ್ಷೆ ಲತಾ ಸುರೇಶ್, ಉಪಾಧ್ಯಕ್ಷ ಹರಿಶ್ಚಂದ್ರ ಕುಲಾಲ್, ಕಾರ್ಯದರ್ಶಿ ಪ್ರತೀಕ್, ಕಾರ್ಯಾಧ್ಯಕ್ಷ ಆದರ್ಶ ವಿ.ಎ., ಮೇಳದ ಅರ್ಚಕ ಪದ್ಯುಮ್ನ ಭಟ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article