ನಾವು ಸಂವಿಧಾನಕ್ಕೆ ಗೌರವವನ್ನು ನೀಡಬೇಕು: ಶಾಸಕ ಕೋಟ್ಯಾನ್

ನಾವು ಸಂವಿಧಾನಕ್ಕೆ ಗೌರವವನ್ನು ನೀಡಬೇಕು: ಶಾಸಕ ಕೋಟ್ಯಾನ್


ಮೂಡುಬಿದಿರೆ: ಜಗತ್ತಿನ ಶ್ರೇಷ್ಠ ಮತ್ತು ಪವಿತ್ರವಾದ ಸಂವಿಧಾನ ವಿದ್ದರೆ ಅದು ಭಾರತದ ಸಂವಿಧಾನ ಮಾತ್ರ. ನಮ್ಮ ಸಂವಿಧಾನಕ್ಕೆ ನಾವು ಗೌರವವನ್ನು ನೀಡಬೇಕು, ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಓದಿ ತಿಳಿದುಕೊಂಡು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು. 


ಅವರು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಸಮಾಜ ಕಲ್ಯಾಣ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾಯ೯ಕ್ರಮವನ್ನು ಉದ್ಘಾಟಿಸಿ, ಅಂಬೇಡ್ಕರ್ ಬಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದರು. 


ನಮ್ಮ ಸಂವಿಧಾನಕ್ಕೆ ಪ್ರಧಾನಿ, ರಾಷ್ಟ್ರಪತಿ ಸಹಿತ ಜನಪ್ರತಿನಿಧಿಗಳು, ಅಧಿಕಾರಿ ವಗ೯ದವರು ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ ಕೆಲಸಗಳನ್ನು ಮಾಡಬೇಕು ಹಾಗೂ ನಮಗೆ ಉತ್ತಮವಾದ ಸಂವಿಧಾನವನ್ನು ನೀಡಿರುವ ಅಂಬೇಡ್ಕರ್ ಅವರನ್ನು ಸದಾ ನೆನಪಿಸಿಕೊಳ್ಳಬೇಕೆಂದರು. 


ತಾಲೂಕು ತಹಶೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ ಮಾತನಾಡಿ, ವಿದ್ಯಾರ್ಥಿಗಳು ತಾವು ಯಾವ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಇಚ್ಛೆ ಇಟ್ಟಿರುವಿರೋ ಅದಕ್ಕಿಂತ ಮೊದಲು ಸಂವಿಧಾನದ ಮೂಲ ಆಶಯಗಳನ್ನು ತಿಳಿದುಕೊಳ್ಳಬೇಕು. ಜನಪರ ಕಾಳಜಿ, ಸಮಾಜಮುಖಿ ಚಿಂತನೆ ದೀನ ದಲಿತ ಹಾಗೂ ಹಿಂದುಳಿದ ವಗ೯ದವರಿಗೆ ವಿಶೇಷ ಆದ್ಯತೆಯಲ್ಲಿ ಸೇವೆ ನೀಡಬೇಕು ಎಂದ ಅವರು ಸಮಗ್ರ ಹಾಗೂ ಸದೃಢ ಕಟ್ಟಲು ಸಂವಿಧಾನವನ್ನು ಸರಿಯಾಗಿ ಅಥೈ೯ಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಶ್ರೀ ಮಹಾವೀರ ಕಾಲೇಜಿನ ಉಪನ್ಯಾಸಕಿ ಪದ್ಮಶ್ರೀ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಂವಿಧಾನದ ಬಗ್ಗೆ ಮಾತನಾಡಿದರು.

ಸನ್ಮಾನ: ಮೂಡುಬಿದಿರೆ ತಾಲೂಕಿನಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಲ್ಲಬೆಟ್ಟುವಿನ ಅಪೂವ೯, ಚಿತ್ರಕಲೆ ಸ್ಪಧೆ೯ಯಲ್ಲಿ ಬಿ.ಆರ್.ಪಿ.ಯ  ಸಾನ್ವಿ, ನಿಲಿಮಾ ಜೆನವಿವ್ ಫೆನಾಂಡಿಸ್ ಹಾಗೂ ಜೈನ ಪ್ರೌಢಶಾಲೆಯ ಸಮಥ್೯ ಆಚಾಯ೯ ಅವರನ್ನು ಸನ್ಮಾನಿಸಲಾಯಿತು.

ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕನ್ನಡ ಜಾಗೃತಿ ಸಮಿತಿ ಸದಸ್ಯ ರಾಜೇಶ್ ಕಡಲಕೆರೆ, ತಾಲೂಕು ಪಂಚಾಯತ್ ಕಾಯ೯ನಿವ೯ಹಣಾಧಿಕಾರಿ ಕುಸುಮಾಧರ,  ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನವೀನ್ ಪುತ್ರನ್, ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಉಪಸ್ಥಿತರಿದ್ದರು.

ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿದರು. ಉಪ ತಹಸೀಲ್ದಾರ್ ರಾಮ ಕೆ. ಸಂವಿಧಾನ  ಪೀಠಿಕೆ ಓದಿದರು. ಶಿಕ್ಷಕ ವೆಂಕಟರಮಣ ಕೆರೆಗದ್ದೆ ಕಾಯ೯ಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article