ಪಡುಮಾನಾ೯ಡು ಗ್ರಾ.ಪಂ. ಮಾಜಿ ಅಧ್ಯಕ್ಷ ದಿ. ಶ್ರೀನಾಥ್ ಸುವಣ೯ ಶ್ರದ್ಧಾಂಜಲಿ ಸಭೆ
Wednesday, November 19, 2025
ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕ ದಿ. ಶ್ರೀನಾಥ ಸುವರ್ಣರ ಶ್ರದ್ಧಾಂಜಲಿ ಸಭೆಯು ಬೆಳುವಾಯಿ ಕಂಡಿಗ ಗ್ರೀನ್ ನಲ್ಲಿ ಬುಧವಾರ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಅವರು ಶ್ರದ್ಧಾಂಜಲಿ ಅಪಿ೯ಸಿ ಮಾತನಾಡಿ ಬದುಕಿದಾಗ ಸಮಾಜಕ್ಕೆ ನಾವು ಏನು ಮಾಡಿದ್ದೇವೆ ಎನ್ನುವುದೇ ನಮ್ಮ ಜೀವನದ ಅಂತ್ಯದವರೆಗೆ ಉಳಿಯುತ್ತದೆ. ಪಡುಮಾರ್ನಾಡು ಗ್ರಾಮ ಪಂಚಾಯತ್ ನಲ್ಲಿ ರಸ್ತೆಯೊಂದಕ್ಕೆ ಶ್ರೀನಾಥ್ ಹೆಸರು ನಾಮಕರಣಗೊಳಿಸುವಂತೆ ಸಲಹೆಯಿತ್ತರು.
ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ನಾರಾಯಣ ಪಿ. ಎಂ, ಬಿಜೆಪಿ ಮುಖಂಡ ಕೆ. ಪಿ ಜಗದೀಶ್ ಅಧಿಕಾರಿ, ಎಸ್ ಕೆ ಎಫ್ ಎಲಿಕ್ಷರ್ ಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್, ನಿವೃತ ಸಹಾಯಕ ಆಯುಕ್ತ ಅಚ್ಚುತ, ಬಿಜೆಪಿ ಮುಖಂಡ ರಂಜಿತ್ ಪೂಜಾರಿ, ರಾಜೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಬೆಳುವಾಯಿ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್ ಸೇರಿದಂತೆ ಹಿತೈಷಿಗಳು ಗಣ್ಯರು ಭಾಗವಹಿಸಿದ್ದರು.
ಭಾಸ್ಕರ್ ಆಚಾರ್ಯ ನಿರೂಪಿಸಿದರು. ಮೃತರ ಮಾತೃಶ್ರೀ ಸುಮತಿ ಸುವರ್ಣ, ಪತ್ನಿ ಸಹೋದರರು ಹಾಗೂ ಕುಟುಂಬಿಕರು ಈ ಸಂದಭ೯ದಲ್ಲಿದ್ದರು.
