ಜಿಲ್ಲಾ ಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪಧೆ೯: ಆಳ್ವಾಸ್ ಪ.ಪೂ. ಕಾಲೇಜಿಗೆ ಅವಳಿ ಪ್ರಶಸ್ತಿ
ಆಳ್ವಾಸ್ ಹುಡುಗರ ವಿಭಾಗದಲ್ಲಿ 4 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕಗಳೊಂದಿಗೆ ಒಟ್ಟು 7 ಪದಕ ಗಳಿಸಿ 178 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿತು. ಹುಡುಗಿಯರ ವಿಭಾಗದಲ್ಲಿ 5 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು ಒಟ್ಟು 8 ಪದಕ ಪಡೆದು 213 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ಪಡೆದರು.
ಹುಡುಗರ ವಿಭಾಗ:
60 ಕೆಜಿ ರವಿ ಸಿದ್ದಪ್ಪ (ಪ್ರಥಮ), 65 ಕೆಜಿ ಯಶಸ್ ಜಿ (ತೃತೀಯ), 71 ಕೆಜಿ ಹೇಮಂತ್ ಕೆ ವಿ (ದ್ವಿತೀಯ), 79 ಕೆಜಿ - ಶ್ರೇಯಸ್ (ದ್ವಿತೀಯ), 88 ಕೆಜಿ - ಶಮಂತ್ ಶೆಟ್ಟಿ (ಪ್ರಥಮ), 94 ಕೆಜಿ ಪಾರ್ಥರಾಜ್ ಎಂ (ಪ್ರಥಮ), 110 ಕೆಜಿ ಗಣೇಶ್ ಯು (ಪ್ರಥಮ).
ಹುಡುಗಿಯರ ವಿಭಾಗ:
48 ಕೆಜಿ ಪಲ್ಲವಿ (ಪ್ರಥಮ), 53 ಕೆಜಿ ಮೈತ್ರಿ ರೆಲೆಕರ್ (ದ್ವಿತೀಯ), ದೀಪಿಕಾ ಕುರಗೋಡು (ತೃತೀಯ), 58 ಕೆಜಿ ಕಾಂಚನಾ ಭೀಮಪ್ಪ (ಪ್ರಥಮ), 63 ಕೆಜಿ - ಸಿಂಚನಾ ಎಂ (ಪ್ರಥಮ), 69 ಕೆಜಿ ನೀಲಾಂಬಿಕೆ ಜಿ ಪಾಟೀಲ್ (ಪ್ರಥಮ), 79 ಕೆಜಿ ಸ್ಪೂರ್ತಿ ಟಿ ಜೆ (ಪ್ರಥಮ), 86 ಕೆಜಿ ಅಶ್ವಿನಿ ಸಿದ್ದಪ್ಪ (ದ್ವಿತೀಯ) ಪಡೆದುಕೊಂಡರು.
ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.