ಕಂಬಳದಲ್ಲಿ ಸಬ್ ಜ್ಯೂನಿಯರ್ ವಿಭಾಗದ ಸ್ಪಧೆ೯ ರದ್ದು

ಕಂಬಳದಲ್ಲಿ ಸಬ್ ಜ್ಯೂನಿಯರ್ ವಿಭಾಗದ ಸ್ಪಧೆ೯ ರದ್ದು


ಮೂಡುಬಿದಿರೆ: ಅವಿಭಜಿತ ಜಿಲ್ಲೆಗಳಲ್ಲಿ ನಡೆಯುವ ಕಂಬಳಗಳಲ್ಲಿ ಸಬ್ ಜ್ಯೂನಿಯರ್ ವಿಭಾಗದ ಸ್ಪಧೆ೯ಗಳನ್ನು ರದ್ದುಗೊಳಿಸಲಾಗಿದೆ. 

ಇದರಿಂದಾಗಿ ಕಳೆದ 15 ವರ್ಷಗಳಿಂದ ಯಶಸ್ವಿಯಾಗಿ ಆಯೋಜನೆಗೊಳ್ಳುತ್ತಿದ್ದ ಪಣಪಿಲ ಕಂಬಳದಲ್ಲಿ ಈ ಬಾರಿ 'ಸಬ್ ಜೂನಿಯರ್' ವಿಭಾಗದ ಸ್ಪರ್ಧೆ ಮೊಟಕುಗೊಂಡಿದೆ. ಪಶುಸಂಗೋಪನಾ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಬಂದಿರುವ ಆದೇಶದ ಮೇರೆಗೆ ಕಾನೂನಿನ ತೊಡಕಿನ ಕಾರಣದಿಂದ ಈ ವಿಭಾಗವನ್ನು ರದ್ದುಗೊಳಿಸಲಾಗಿದೆ ಎಂದು ಪಣಪಿಲ ಕಂಬಳ ಸಮಿತಿ ತಿಳಿಸಿದೆ.

ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಅಶ್ವಥ್ ಪಣಪಿಲ ಮಾಹಿತಿ ನೀಡಿದ್ದು, ಈ ವರ್ಷ ನೇಗಿಲು ಕಿರಿಯ ಸೇರ್ಪಡೆಗೊಳಿಸಲಾಗಿದೆ. ಉಳಿದಂತೆ  ಹಗ್ಗ ಕಿರಿಯ, ಮತ್ತು ವಿಶೇಷವಾಗಿ ನೇಗಿಲು ಹಿರಿಯ ವಿಭಾಗಗಳ ಸ್ಪರ್ಧೆಗಳು ಎಂದಿನಂತೆ ನಡೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾನೂನು ಪಾಲನೆಯ ದೃಷ್ಟಿಯಿಂದ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಂಬಳಾಭಿಮಾನಿಗಳು ಹಾಗೂ ಕೋಣಗಳ ಯಜಮಾನರು ಸಮಿತಿಯ ನಿರ್ಧಾರಕ್ಕೆ ಸಹಕರಿಸಬೇಕೆಂದು ಸಮಿತಿ ವಿನಂತಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article