ಮೌಲ್ಯ ಮತ್ತು ಸಂಸ್ಕಾರಯುತ ಶಿಕ್ಷಣ ಅವಶ್ಯಕ: ರಾಜ್ಯಪಾಲ ಎಸ್. ಅಬ್ದುಲ್ ನಝೀರ್

ಮೌಲ್ಯ ಮತ್ತು ಸಂಸ್ಕಾರಯುತ ಶಿಕ್ಷಣ ಅವಶ್ಯಕ: ರಾಜ್ಯಪಾಲ ಎಸ್. ಅಬ್ದುಲ್ ನಝೀರ್


ಮೂಡುಬಿದಿರೆ: ವಿದ್ಯಾಥಿ೯ಗಳಿಗೆ ಇಂದಿನ ದಿನಗಳಲ್ಲಿ ಮೌಲ್ಯಯುತ, ಸಂಸ್ಕಾರಯುತವಾದ ಶಿಕ್ಷಣ ಅವಶ್ಯಕವಾಗಿದ್ದು ಅದನ್ನು ಯುವರಾಜ್ ಜೈನ್ ಹಾಗೂ ರಶ್ಮಿತಾ ಜೈನ್  ಕಳೆದ 14 ವರ್ಷಗಳಿಂದ ಮೂಡುಬಿದಿರೆಯಲ್ಲಿ ನೀಡುತ್ತಿರುವುದು ಗಮನಾರ್ಹ ಎಂದು ಆಂಧ್ರ ಪ್ರದೇಶದ ರಾಜ್ಯಪಾಲ, ಭಾರತದ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಎಸ್. ಅಬ್ದುಲ್ ನಝೀರ್ ಹೇಳಿದರು.

ಅವರು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ  ನೂತನ ಶೈಕ್ಷಣಿಕ ಕಟ್ಟಡವನ್ನು  ಶುಕ್ರವಾರ ಲೋಕಾಪ೯ಣೆಗೊಳಿಸಿ ಮಾತನಾಡಿದರು.

ಜಗದ್ಗುರು ಮಧ್ವಾಚಾರ ಮಹಾಸಂಸ್ಥಾನಮ್ ಶ್ರೀ ಸುಬ್ರಹ್ಮಣ್ಯ ಮಠದ ಪ.ಪೂ. ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ನಮಗೆ ಅಪಾರವಾದ ಬುದ್ಧಿವಂತಿಕೆಯ ಜೊತೆಗೆ ವಿದ್ಯಾವಂತಿಕೆಯೂ ಮುಖ್ಯ. ವಿದ್ಯಾರ್ಥಿಗಳಲ್ಲಿರುವ ಬುದ್ಧಿಶಕ್ತಿಗೆ ವೇದಿಕೆಯಾಗಿ ವ್ಯಕ್ತಿತ್ವವನ್ನು ರೂಪಿಸುತ್ತಿರುವ ಶಿಕ್ಷಣ ಸಂಸ್ಥೆ ಎಕ್ಸಲೆಂಟ್ ವಿದ್ಯಾಸಂಸ್ಥೆ. ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು ಕಾಲ‌ಕಾಲಕ್ಕೆ ಅಪ್ ಡೇಟ್ ಆಗುತ್ತ ಮುಂದಿನ ಸಮಯಕ್ಕೆ ಗುಣಮಟ್ಡದ ಶಿಕ್ಷಣ ಸಿಗುತ್ತಿರುವುದು ಶ್ಲಾಘನೀಯ ಎಂದರು.

ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿ, ಮೂಡುಬಿದಿರೆಯ ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಇಂದು ಹುಟ್ಟೂರಿ ಮೇಲೆ ಅಭಿಮಾನವಿಟ್ಟು ನಮ್ಮ ಸಂಸ್ಥೆಗೆ ಅಬ್ದುಲ್ ನಝೀರ್ ಬಂದಿರುವುದು ನಮಗೆ ಸಂತೋಷ ನೀಡುವಂತದ್ದು. ಎಕ್ಸಲೆಂಟ್ ಸಂಸ್ಥೆ ತಮ್ಮ ಪ್ರಾರಂಭಿಕ ಹಂತದಿಂದ ಹಿಡಿದು, ಇಂದಿನವರೆಗೂ ಪರಿಪೂರ್ಣತೆಯನ್ನು ಕಾಯ್ದುಕೊಂಡು ಬರುತ್ತಿದೆ. ಸಂದರ್ಭಕ್ಕೆ ಅನುಗುಣವಾಗಿ ಉನ್ನತ ವ್ಯಕ್ತಿತ್ಬದ  ವ್ಯಕ್ತಿಗಳು ನಮ್ಮ ಸಂಸ್ಥೆಗೆ ಬಂದು ನಮಗೆ ಪ್ರೇರಣೆ ನೀಡುತ್ತಿದ್ದಾರೆ ಎಂದರು.

ಮಾಜಿ ಸಚಿವ, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಗೌರವಾಧ್ಯಕ್ಷ ಕೆ. ಅಭಯಚಂದ್ರ ಜೈನ್, ಕಾರ್ಯದರ್ಶಿ  ರಶ್ಮಿತಾ ಜೈನ್,  ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಉಪನ್ಯಾಸಕರಾದ ಡಾ. ವಾದಿರಾಜ ಕಲ್ಲೂರಾಯ ಹಾಗೂ ವಿಕ್ರಂ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article