‘ನಿಮ್ಮ ಮಗನ ಕಲಿಕಾ ಮಟ್ಟ ತೃಪ್ತಿಕರವಾಗಿಲ್ಲ ಎಂದ ಶಿಕ್ಷಕರು’ ನೊಂದ ಬಾಲಕ ಆತ್ಮಹತ್ಯೆ

‘ನಿಮ್ಮ ಮಗನ ಕಲಿಕಾ ಮಟ್ಟ ತೃಪ್ತಿಕರವಾಗಿಲ್ಲ ಎಂದ ಶಿಕ್ಷಕರು’ ನೊಂದ ಬಾಲಕ ಆತ್ಮಹತ್ಯೆ


ಕಡಬ: ‘ನಿಮ್ಮ ಮಗನ ಕಲಿಕಾ ಮಟ್ಟ ತೃಪ್ತಿಕರವಾಗಿಲ್ಲ ಎಂದು ಶಿಕ್ಷಕರು ಪೋಷಕರು ತಿಳಿಸಿದ ಬೆನ್ನಲ್ಲೇ ಆಘಾತಗೊಂಡ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ದ.ಕ. ಜಿಲ್ಲೆಯ ಕಡಬದಲ್ಲಿ ಗುರುವಾರ ನಡೆದಿದೆ. 

ಈ ಘಟನೆ ಪೋಷಕರು- ಶಿಕ್ಷಕರು ಮಾತ್ರವಲ್ಲದೇ ಇಡೀ ನಾಗರಿಕ ಸಮಾಜವೇ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆ ಗ್ರಾಮದಲ್ಲಿ 9ನೇ ತರಗತಿ ವಿದ್ಯಾರ್ಥಿ, ನೂಜಿಬಾಳ್ತಿಲ ಗ್ರಾಮದ ಖಂಡಿಗ ಮನೆಯ ನಿವಾಸಿ ಗಗನ್ (14) ಆತ್ಮಹತ್ಯೆ ಮಾಡಿಕೊಂಡ ಬಾಲ. ಆತ ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.

ಪೋಷಕರು ಶಾಲೆಗೆ ತೆರಳಿ ಮಗನ ವಿದ್ಯಾಭ್ಯಾಸದ ಪ್ರಗತಿ ವಿಚಾರಿಸಿದ್ದರು. ಈ ವೇಳೆ ಶಿಕ್ಷಕರು ನಿಮ್ಮ ಮಗನ ಕಲಿಕಾ ಮಟ್ಟ ತೃಪ್ತಿಕರವಾಗಿಲ್ಲವೆಂದು ತಿಳಿಸಿದ್ದರು. ಇದರಿಂದ ಬಾಲಕ ತೀವ್ರವಾಗಿ ನೊಂದುಕೊಂಡಿದ್ದ ಎಂದು ಹೇಳಲಾಗಿದೆ. ಇದರ ಮನೆಗೆ ಮರಳಿದ ಬಾಲಕ ಕೆಲವು ಸಮಯ ಆಟವಾಡಿ ನಂತರ ತನ್ನ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾನೆ.

ಕೆಲ ಸಮಯದ ನಂತರ ಗಗನ್ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಪೋಷಕರು ಬಾಗಿಲು ಬಲವಂತವಾಗಿ ತೆರೆಯಲು ಯತ್ನಿಸಿದಾಗ, ಬಾಲಕ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದನು. ತಕ್ಷಣವೇ ಆತನನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.

ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಗನ್ ತಂದೆ-ತಾಯಿ ಹಾಗೂ ಇಬ್ಬರು ಸಹೋದರ-ಸಹೋದರಿಯನ್ನು ಅಗಲಿದ್ದಾನೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article