ಸ್ವಸ್ತಿ ಶ್ರೀ ಜೈನ ಪ.ಪೂ. ಕಾಲೇಜಿನಲ್ಲಿ ವಾಷಿ೯ಕ ಕ್ರೀಡಾಕೂಟ
ಕಾಲೇಜಿನ ಸ್ಥಾಪಕ ಅಧ್ಯಕ್ಷ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅವಶ್ಯವಾಗಿ ಪಾಲ್ಗೊಂಡು ಉತ್ತಮ ವಿದ್ಯಾರ್ಥಿಗಳಾಗಿ ಕ್ರೀಡೆಯಲ್ಲಿ ಭಾಗವಹಿಸುದರಿಂದ ಓದಲು ಉತ್ಸಾಹ ಹೆಚ್ಚುತ್ತದೆ. ತಮ್ಮ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯಗಳನ್ನ ಬೆಳೆಸಿಕೊಳ್ಳಲು ಕ್ರೀಡೆ ಅತೀ ಅವಶ್ಯಕ ಎಂದು ನುಡಿದರು.
ಎ.ಸುಧೀಶ್ ಕುಮಾರ್ ಬೆಟ್ಕೇರಿ ಉದ್ಘಾಟಿಸಿ ಮಾತನಾಡಿ ಕ್ರೀಡೆ ಮಕ್ಕಳ ವಿವಿಧ ರೀತಿಯ ಬೆಳವಣಿಗೆಗೆ ಅವಶ್ಯಕ. ಪ್ರತಿಯೊಂದು ಮಗುವಿನಲ್ಲೂ ಬೇರೆ ಬೇರೆ ರೀತಿಯ ಪ್ರತಿಭೆಗಳು ಇರುತ್ತದೆ ಅದನ್ನು ನಾವು ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಆ ಕ್ಷೇತ್ರದಲ್ಲಿ ಮುನ್ನಡೆಯಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಪೂಣ೯ಚಂದ್ರ ಜೈನ್ ಮಾತನಾಡಿ, ಮಕ್ಕಳಲ್ಲಿ ಪ್ರಗತಿಯನ್ನು ಸಾಧಿಸಲು ಕ್ರೀಡೆ ಅತ್ಯವಶ್ಯಕ. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯಗಳೆರಡು ಬೆಳವಣಿಗೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಸದಿ ಮುಕ್ತೇಸರ ಪಟ್ಣ ಶೆಟ್ಟಿ ಸುದೇಶ್ ಕುಮಾರ್ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕಿ ಸುಜಾತ ವಂದಿಸಿದರು. ಬಳಿಕ ವಿವಿಧ ಕ್ರೀಡಾ ಚಟುವಟಿಕೆ ನಡೆಯಿತು.