ಅಂತರಾಷ್ಟ್ರೀಯ ಮಟ್ಟದ ಕರಾಟೆ: ಪ್ರಶಾಂತ್ ಬಿ. ಶೆಟ್ಟಿಗೆ ಚಿನ್ನ, ಮುಬೀನತುಲ್ ಅಸ್ಮಿಯಾಗೆ ಬೆಳ್ಳಿ
Friday, November 28, 2025
ಮೂಡುಬಿದಿರೆ: ಮಹಾರಾಷ್ಟ್ರದ ಅಂಧೇರಿಯಲ್ಲಿರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾಂಬ್ಯಾಕ್ಟ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಮೂಡುಬಿದಿರೆಯ ಕರಾಟೆಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಮೂಡುಬಿದಿರೆಯ ಪ್ರಶಾಂತ್ ಬಿ. ಶೆಟ್ಟಿ ಅವರು ಸೀನಿಯರ್ ಬ್ಲಾಕ್ ಬೆಲ್ಟ್ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಗಳಿಸಿದ್ದಾರೆ. ಮೂಡುಬಿದಿರೆಯ ವಿದ್ಯಾರ್ಥಿನಿ ಮುಬೀನತುಲ್ ಅಸ್ಮಿಯ ಅವರು ಸಹ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಬ್ಲಾಕ್ ಬೆಲ್ಟ್ ವಯೋಮಿತಿಯ ಕುಮಿಟೆ ಮತ್ತು ಕಟಾ ಎರಡೂ ವಿಭಾಗಗಳಲ್ಲಿ ಬೆಳ್ಳಿಯ ಪದಕಗಳನ್ನು ಪಡೆದಿದ್ದಾರೆ.
ಸಾಧಕರಿಬ್ಬರೂ ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್‌ನ ಮುಖ್ಯ ಶಿಕ್ಷಕರಾದ ಮುಹಮ್ಮದ್ ನದೀಮ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.