ರಾಜ್ಯ ಅಹ೯ತಾ ಪರೀಕ್ಷೆ: ಉಪನ್ಯಾಸಕರಾದ ಡೆಲ್ಸನ್ ಡಿ'ಸೋಜ, ರಶ್ಮಿತಾ ಕೆ.ಆರ್.ಗೆ ಉತ್ತಮ ಅಂಕ
Friday, November 28, 2025
ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ಇಬ್ಬರು ಉಪನ್ಯಾಸಕರು ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಾಲೇಜಿನ ಗಣಿತಶಾಸ್ತ್ರದ ಉಪನ್ಯಾಸಕ ಡೆಲ್ಸನ್ ಡಿಸೋಜ ಮತ್ತು ಜೀವಶಾಸ್ತ್ರದ ಉಪನ್ಯಾಸಕಿ ರಶ್ಮಿತಾ ಕೆ. ಆರ್ ಅವರು ಪ್ರತಿಷ್ಠಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಸಾಧಕ ಉಪನ್ಯಾಸಕರನ್ನು ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ.