ಕಂಬಳಕ್ಕೆ ರಾಷ್ಟ್ರದ ಮಾನ್ಯತೆಗಾಗಿ ಮೋದಿಗೆ ಮನವಿ: ರಾಜ್ಯ ಕಂಬಳ ಅಸೋಸಿಯೇಷನ್ ನಿಧಾ೯ರ
ಕಂಬಳ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ಮಾತನಾಡಿ ಸಧ್ಯ ಕಂಬಳಕ್ಕೆ 24 ಮಂದಿ ತೀರ್ಪುಗಾರರಿದ್ದು ಇಷ್ಟೊಂದು ಸಂಖ್ಯೆಯ ತೀರ್ಪುಗಾರರು ಕಂಬಳಕ್ಕೆ ಬೇಕಿಲ್ಲ. ಖರ್ಚು ವೆಚ್ಚವನ್ನು ನಿಯಂತ್ರಿಸುವ ದೃಷ್ಟಿಯಿಂದಲು ಈ ನಿರ್ಧಾರ ಅನಿವಾಯ೯ವಿದೆ. ಎಷ್ಟು ಮಂದಿ ಮತ್ತು ಯಾವ್ಯಾವ ತೀರ್ಪುಗಾರರು ಬೇಕೆಂಬುದನ್ನು ಆಯಾಯ ಕಂಬಳ ಆಯೋಜಕರು ನಿರ್ಧರಿಸಬೇಕು. ಇವರಿಗೆ ನೀಡುವ ವೇತನದ ಬಗ್ಗೆ ರಾಜ್ಯ ಕಂಬಳ ಸಮಿತಿ ತಿಳಿಸುವುದು ಎಂದರು.
ಸರಕಾರದಿಂದ ಬಿಡುಗಡೆಯಾದ ಅನುದಾನವನ್ನು ಎಲ್ಲಾ ಕಂಬಳಗಳಿಗೆ ಸಮಾನವಾಗಿ ಹಂಚಲು ನಿರ್ಧರಿಸಲಾಯಿತು.
ಸನ್ಮಾನ:
ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕಂಬಳ ಕೋಣಗಳ ಯಜಮಾನರಾದ ಭಾಸ್ಕರ್ ಕೋಟ್ಯಾನ್ ಹಾಗೂ ಶಾಂತರಾಮ ಶೆಟ್ಟಿ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಜಪ್ಪು ಕಂಬಳದ ಅಧ್ಯಕ್ಷ ಅನಿಲ್ ಶೆಟ್ಟಿ, ಹೊಕ್ಕಾಡಿಗೋಳಿ ಕಂಬಳದ ರಶ್ಮಿತ್ ಶೆಟ್ಟಿ, ನಾರಿಂಗಾನ ಕಂಬಳದ ಕಾಯಾ೯ಧ್ಯಕ್ಷ ಪ್ರಶಾಂತ್ ಕಾಜವ, ಐಕಳ ಕಂಬಳದ ಕಾಯಾ೯ಧ್ಯಕ್ಷ ಚಿತ್ತರಂಜನ್ ಭಂಡಾರಿ, ಗುರುಪುರ ಕಂಬಳದ ವಿಜಯಕುಮಾರ್, ಮುಲ್ಕಿ ಅರಸು ಕಂಬಳದ ಗೌತಮ್ ಜೈನ್, ಕೋಣಗಳ ಯಜಮಾನರುಗಳಾದ ಮಾಳ ದಿನೇಶ್ ಶೆಟ್ಟಿ ಮತ್ತು ತ್ರಿಶಾಲ್ ಕೆ. ಪೂಜಾರಿ ಚಚೆ೯ಯಲ್ಲಿ ಪಾಲ್ಗೊಂಡಿದ್ದರು.
ಅಸೋಸಿಯೇಶನ್ ನ ಪ್ರಮುಖರಾದ ಪಿ.ಆರ್ ಶೆಟ್ಟಿ, ಮುಚ್ಚೂರು ಲೋಕೇಶ್ ಶೆಟ್ಟಿ, ವಿಜಯ ಕುಮಾರ್ ಕಂಗಿನ ಮನೆ ಮತ್ತು ಚಂದ್ರಹಾಸ ಸನಿಲ್ ಉಪಸ್ಥಿತರಿದ್ದರು.

