ಬುರ್ಖಾಧರಿಸಿಕೊಂಡು ಬಂದು ಕತ್ತಿ ಬೀಸಿ ಪತಿಯ ಹತ್ಯೆಗೆ ಯತ್ನಿಸಿದ ಪತ್ನಿ
ಬಂಟ್ವಾಳ: ವಸ್ತ್ರ ಮಳಿಗೆಗೆ ಬುರ್ಖಾಧರಿಸಿ ಗ್ರಾಹಕನ ಸೋಗಿನಲ್ಲಿ ಬಂದ ಪತ್ನಿ ಕ್ಯಾಶ್ ಕೌಂಟರ್‌ನಲ್ಲಿ ಕುಳಿತಿದ್ದ ಪತಿಯನ್ನೇ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಬಿ.ಸಿರೋಡಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬುಧವಾರ ರಾತ್ರಿ ನಡೆದಿದೆ.
ಕೃಷ್ಣ ಕುಮಾರ್ ಸೋಮಯಾಜಿ (57) ಅವರು ಪತ್ನಿಯ ಕತ್ತಿಯೇಟಿನಿಂದ ಗಂಭೀರ ಸ್ವರೂಒದ ಗಾಯಗೊಂಡಿದ್ದು,ಚಿಕಿತ್ಸೆಗಾಗಿ ಆಸ್ಪತ್ರೆಗಾಗಿ ದಾಖಲಿಸಲಾಗಿದೆ. ಗಾಯಾಳುವಿನ ಪತ್ನಿ ಆರೋಪಿ ಜ್ಯೋತಿ ಸೋಮಯಾಜಿಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಕೃಷ್ಣ ಕುಮಾರ್ ಸೋಮಯಾಜಿ ಅವರು ಬಿ.ಸಿ.ರೋಡಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ವಸ್ತ್ರದ ಮಳಿಗೆಯನ್ನು ಹೊಂದಿದ್ದು,ಸುಮಾರು ರಾತ್ರಿ 7 ರಿಂದ 7.30 ರ ಮಧ್ಯೆ ಬುರ್ಖಾಧರಿಸಿಕೊಂಡು ರಿಕ್ಷಾದಲ್ಲಿ ಗ್ರಾಹಕನ ಸೋಗಿನಲ್ಲಿ ಆರೋಪಿ ಜ್ಯೋತಿ ಗ್ರಾಹಕನ ಸೋಗಿನಲ್ಲಿ ಅಂಗಡಿ ಬಂದು ಕ್ಯಾಶ್ ಕೌಂಟರ್‌ನಲ್ಲಿ ಕುಳಿತಿದ್ದ ಪತಿಯ ಮೇಲೆ ಏಕಾಏಕಿ ಕತ್ತಿ ಬೀಸಿದ್ದು, ಪರಿಣಾಮ ಕೃಷ್ಣ ಸೋಮಯಾಜಿ ಅವರು ಕೈಯ ಭಾಗಕ್ಕೆ ಗಂಭೀರಸ್ವರೂಪದ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.
ಕೃತ್ಯದ ಬಳಿಕ ಆರೋಪಿತೆ ಸ್ಥಳದಿಂದ ಪರಾರಿಯಾಗಿದ್ದು, ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆಕೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಗುರಿಪಡಿಸಿದ್ದಾರೆ.
ಗಾಯಾಳು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಈಘಟನೆ ನಡೆದಿದೆಯೆಂದು ಶಂಕಿಸಲಾಗಿದೆ. ಇವರ ಕಲಹ ಇತ್ತೀಚೆಗೆ ಪೊಲೀಸ್ ಠಾಣೆಯ ಮೆಟ್ಟಿಲು ಕೂಡ ಹತ್ತಿತ್ತು ಎನ್ನಲಾಗಿದೆ.