ಪ.ಪೂ. ಕಾಲೇಜುಗಳ ರಾಜ್ಯಮಟ್ಟದ ನೆಟ್ ಬಾಲ್ ಸ್ಪಧೆ೯ : ಎಡಪದವು ಸ್ವಾಮಿ ವಿವೇಕಾನಂದ ಬಾಲಕಿಯರ ತಂಡ ಪ್ರಥಮ
Thursday, November 6, 2025
ಮೂಡುಬಿದಿರೆ: ಸುಬ್ರಹ್ಮಣ್ಯದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ನೆಟ್ ಬಾಲ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿದೆ.
ತಂಡದಲ್ಲಿ ಭಾಗವಹಿಸಿರುವ ನಿಖಿತಾ, ಹರ್ಷಿತಾ, ಸಂಧ್ಯಾ, ಹೇಮ, ದಿವ್ಯ ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕ, ದ.ಕ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ)ಯ ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ ಉಪಸ್ಥಿತರಿದ್ದಾರೆ.