ಎಂಸಿಎಸ್ ಸೊಸೈಟಿಯ ಕಲ್ಪವೃಕ್ಷ ಪ್ರಶಸ್ತಿಗೆ ಹಿರಿಯ ನಿದೇ೯ಶಕ ಜಾಜ್೯ ಮೋನಿಸ್ ಆಯ್ಕೆ
Friday, November 7, 2025
ಮೂಡುಬಿದಿರೆ: ಇಲ್ಲಿನ ಪ್ರತಿಷ್ಠಿತ ಮೂಡುಬಿದಿರೆ ಕೋಆಪರೇಟಿವ್ ಸರ್ವಿಸ್ (ಎಂಸಿಎಸ್) ಸೊಸೈಟಿ ಕೊಡಮಾಡುವ ಸಹಕಾರ ಕಲ್ಪವೃಕ್ಷ ಪ್ರಶಸ್ತಿಗೆ ಸೊಸೈಟಿಯ ಹಿರಿಯ ನಿರ್ದೇಶಕರಾದ ಜಾರ್ಜ್ ಮೋನಿಸ್ ಅವರು ಆಯ್ಕೆಯಾಗಿದ್ದಾರೆ.
ಸಮಗ್ರ ಸಾಧಕ ಪ್ರಶಸ್ತಿಗೆ ಮೂಡುಬಿದಿರೆಯ ಉದ್ಯಮಿ ಪದ್ಮಶ್ರೀ ಏಜೆನ್ಸೀಸ್ ಮಾಲಕರಾದ ಅಭಿಜಿತ್ ಎಂ. ಅವರನ್ನು ಗೌರವಿಸಲು ತೀರ್ಮಾನಿಸಲಾಗಿದೆ. ಈ ಗೌರವವನ್ನು ಸೊಸೈಟಿ ಸಭಾ ಭವನದಲ್ಲಿ ನಡೆಯುವ ಸಹಕಾರ ಸಪ್ತಾಹ ಸಮಾರಂಭದಲ್ಲಿ ನೀಡಲಾಗುತ್ತದೆ.