ಮಕ್ಕಳ ದಿನಾಚರಣೆಯಂಗವಾಗಿ ಮೂಡುಬಿದಿರೆ ಲಯನ್ಸ್ ಕ್ಲಬ್‌ನಿಂದ ಮಕ್ಕಳಿಗಾಗಿ ವಿವಿಧ ಸ್ಪಧೆ೯ಗಳು: ರೋಟರಿ ಸೆಂಟ್ರಲ್ ಸ್ಕೂಲ್‌ಗೆ ಸಮಗ್ರ ಪ್ರಶಸ್ತಿ
Thursday, November 20, 2025
ಮೂಡುಬಿದಿರೆ: ಸುವಣ೯ ಮಹೋತ್ಸವದ ಸಂಭ್ರಮದಲ್ಲಿರುವ ಮೂಡುಬಿದಿರೆಯ ಲಯನ್ಸ್ ಕ್ಲಬ್ ವಷ೯ವಿಡೀ ವಿವಿಧ ಸೇವಾ ಯೋಜನೆಗಳನ್ನು ಮಾಡುತ್ತಾ ಬಂದಿದೆ.
ಈ ವಷ೯ದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಅವರ ನೇತೃತ್ವದಲ್ಲಿ ಸಮಾಜ ಮಂದಿರದಲ್ಲಿ ತಾಲೂಕಿನ ವಿವಿಧ ಶಾಲೆಯ 400ರಷ್ಟು ವಿದ್ಯಾಥಿ೯ಗಳನ್ನು ಸೇರಿಸಿ ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಸ್ಪಧೆ೯ಗಳನ್ನು ಆಯೋಜಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸಲಾಯಿತು.
ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಮೂಡುಬಿದಿರೆ ಇದರ ಆಶ್ರಯದಲ್ಲಿ ನಡೆದ ಮಕ್ಕಳ ಕ್ರೀಡಾಕೂಟಕ್ಕೆ ಹಿರಿಯ ಲಯನ್ಸ್ ಸದಸ್ಯ ಕೆ. ಶ್ರೀಪತಿ ಭಟ್ ಚಾಲನೆ ನೀಡಿದರು.
ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಪಠ್ಯದ ಜೊತೆಗೆ ವಿವಿಧ ಸಾಂಸ್ಕೃತಿಕ ಮತ್ತು ಆಟೋಟ ಸ್ಪಧೆ೯ಗಳನ್ನು ಜೀವನದ ಭಾಗವಾಗಿ ಸ್ವೀಕರಿಸಿಕೊಂಡಾಗ ಯಶಸ್ವಿಯಾಗಲು ಸಾಧ್ಯ. ಸಂಘ ಸಂಸ್ಥೆಗಳು ಸಂಸ್ಥೆಗಳು ಕೆಲಸ ಮಾಡಿದಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸುವರ್ಣೋತ್ಸವ ವರ್ಷದ ಸಂಭ್ರಮದಲ್ಲಿರುವ ಮೂಡುಬಿದಿರೆ ಲಯನ್ಸ್ ಕ್ಲಬ್ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಅಭಿನಂದನಾಹ೯ ಎಂದರು.
ಬಹುಮಾನಗಳ ಪ್ರಾಯೋಜಕಿ ಸಿಂಚನ ಚಿಟ್ಸ್ ಪೈ.ಲಿ. ನಿರ್ದೇಶಕಿ ಸಂಗೀತಾ ಎಂ. ಪ್ರಭು ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಮಿನೇಜಸ್ ಜಗದೀಶ್ಚಂದ್ರ ಡಿ.ಕೆ., ವಲಯಾಧ್ಯಕ್ಷ ಜೊಸ್ಸಿ ಶುಭಾಶಂಸನೆಗೈದರು. ಕಾರ್ಯಕ್ರಮದ ಸಂಯೋಜಕ ವಿನೋದ್ ಡೇಸಾ, ನಿಕಟಪೂರ್ವ ಅಧ್ಯಕ್ಷ ಬೊನವೆಂಚರ್ ಮಿನೇಜಸ್, ಲಯನ್ಸ್ ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತ, ಖಜಾಂಚಿ ಹರೀಶ್ ತಂತ್ರಿ ಉಪಸ್ಥಿತರಿದ್ದರು.
ಅಂತರಾಷ್ಟ್ರೀಯ ಭಾಗವಾಗಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಲಯ ಮಟ್ಟದ ಶಾಂತಿಗಾಗಿ ಭಿತ್ತಿಪತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿ ಮಹಮ್ಮದೀಯ ಶಾಲೆಯ ಫಾತಿಮಾ, ರೋಟರಿ ಸೆಂಟ್ರಲ್ ಸ್ಕೂಲ್ ಅಯನಾ ಪಿರೇರಾ ಮತ್ತು ಆಲೀಶಾ ಫಾತಿಮಾ ಅವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ರೋಟರಿ ಸೆಂಟ್ರಲ್ ಸ್ಕೂಲ್ ಸಮಗ್ರ ಪ್ರಶಸ್ತಿ ಶಬ್ದಂ, ದ್ವಿತೀಯ ಸ್ಥಾನಿ ರೋಟರಿ ಪಡೆಯಿತು.
ಹರೀಶ್ ತಂತ್ರಿ ಬಹುಮಾನಿತರ ಪಟ್ಟಿ ವಾಚಿಸಿದರು. ಓಸ್ವಾಲ್ಡ್ ಡಿಕೋಸ್ತ ಧೈಯವಾಕ್ಯ ಪರಿಸಿದರು. ವಿನೋದ್ ಕುಮಾರ್ ನೀತಿಸಂಹಿತೆ ಓದಿದರು. ದಯಾನಂದ ಕಾರ್ಯಕ್ರಮ ನಿರೂಪಿಸಿದರು.



