ಕಲ್ಲಬೆಟ್ಟು ಮೊರಾಜಿ೯ ದೇಸಾಯಿ ವಸತಿ ಶಾಲೆ "ಶೂನ್ಯ  ತ್ಯಾಜ್ಯ ಕ್ಯಾಂಪಸ್": ಪುರಸಭೆಯಿಂದ ಅಭಿನಂದನೆ

ಕಲ್ಲಬೆಟ್ಟು ಮೊರಾಜಿ೯ ದೇಸಾಯಿ ವಸತಿ ಶಾಲೆ "ಶೂನ್ಯ ತ್ಯಾಜ್ಯ ಕ್ಯಾಂಪಸ್": ಪುರಸಭೆಯಿಂದ ಅಭಿನಂದನೆ


ಮೂಡುಬಿದಿರೆ: ತ್ಯಾಜ್ಯ ನಿರ್ವಹಣೆಯಲ್ಲಿ ಸಂಸ್ಥೆಯು ಸಾಧಿಸಿರುವ  ಗಮನಾರ್ಹ ಸಾಧನೆಯನ್ನು ಗುರುತಿಸಿ ಕಲ್ಲಬೆಟ್ಟುವಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಮೂಡುಬಿದಿರೆ ಪುರಸಭೆಯು `ಶೂನ್ಯ ತ್ಯಾಜ್ಯ ಕ್ಯಾಂಪಸ್' ಎಂದು ಅಧಿಕೃತವಾಗಿ  ಮಂಗಳವಾರ ಘೋಷಿಸಿ ಕಾರ್ಯಾಲಯದಲ್ಲಿ ಸಂಸ್ಥೆಯನ್ನು ಅಭಿನಂದಿಸಿತು. ಪ್ರಾಂಶುಪಾಲ ಸಂಗಣ್ಣ ಬಸಯ್ಯ ಹಿರೇಮಠ್, ಕಲಾ ಶಿಕ್ಷಕ ವಿವೇಕ್ ಪಡಿಯಾರ್, ವಾರ್ಡನ್ ಸರಿತಾ ಹಾಗೂ ಪಾಲಕರ ಸಂಘದ ಅಧ್ಯಕ್ಷ ಗಣೇಶ್ ಅವರನ್ನು ಅಭಿನಂದನಾ ಪತ್ರದೊಂದಿಗೆ ಗೌರವಿಸಲಾಯಿತು. 

ಈ ಮೊದಲು ಶೂನ್ಯ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ  ಹೊಂದಿರುವ ಜೈನ ಪ್ರೌಢಶಾಲೆ, ಮಹಮ್ಮದೀಯ ಮತ್ತು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯನ್ನು ಈ ಹಿಂದೆಗುರುತಿಸಿ ಗೌರವಿಸಲಾಗಿದೆ. ಇದೀಗ ನಾಲ್ಕನೇ "ಶೂನ್ಯ ತ್ಯಾಜ್ಯ ಕ್ಯಾಂಪಸ್" ಆಗಿ ಮೊರಾಜಿ೯ ದೇಸಾಯಿ ವಸತಿ ಶಾಲೆಯನ್ನು ಗೌರವಿಸಲಾಯಿತು.

ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಭು, ವಾರ್ಡ್ ಸದಸ್ಯ ಜೊಸ್ಸಿ ಮೆನೇಜಸ್ ಮುಖ್ಯಾಧಿಕಾರಿ ಇಂದು ಎಂ., ಪರಿಸರ ಅಭಿಯಂತರೆ ಶಿಲ್ಪಾ ಎಸ್., ಆರೋಗ್ಯ ಅಧಿಕಾರಿ ಶಶಿರೇಖಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article