ಶ್ರೀ ಮಹಾವೀರ ಕಾಲೇಜಿನಲ್ಲಿ ಸಂವಾದ ಕಾಯ೯ಕ್ರಮ
ಕಾಲೇಜಿನ ಹಳೆ ವಿದ್ಯಾರ್ಥಿ, ಕ್ಷೌಡೆರಾ ಇನ್ಕಾರ್ಪೊರೇಷನ್‌ನ ಪ್ರಧಾನ ಎಂಜಿನಿಯರ್ ವಾದಿರಾಜ ಭಟ್ ಮಾತನಾಡಿ "ಇಂದು ಕಲೆ, ವಿಜ್ಞಾನ, ವಾಣಿಜ್ಯ ಎಂಬ ಗಡಿಗಳನ್ನು ಮೀರಿ ಎಲ್ಲ ವಿಷಯಗಳ ಕುರಿತು ಎಲ್ಲರೂ ತಿಳಿವಳಿಕೆಯನ್ನು ಹೊಂದಿರಬೇಕು. ಅಂಕಗಳಿಗಿಂತ ನಮ್ಮ ಕೌಶಲ್ಯ, ಬುದ್ಧಿಮತ್ತೆ ಮತ್ತು ಸೃಜನಶೀಲ ಆಲೋಚನೆಗಳ ಮೂಲಕ ಉದ್ಯೋಗದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಕೃತಕ ಬುದ್ಧಿಮತ್ತೆಯು ನಮಗೆ ಮಾರ್ಗದರ್ಶನ ಮಾಡಲು ಮತ್ತು ನಮ್ಮ ಕೆಲಸಗಳನ್ನು ಇನ್ನಷ್ಟು ವೇಗವಾಗಿ ಮಾಡಲು ಸಹಾಯಕವಾಗಿದೆ ಎಂದ ಅವರು ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕ್ಷೇತ್ರದ ಪ್ರಸ್ತುತ ಮತ್ತು ಭವಿಷ್ಯದ ಅವಕಾಶಗಳನ್ನು ವಿವರಿಸಿದರು.
ಹಳೆ ವಿದ್ಯಾರ್ಥಿ ಹಾಗೂ ಮೈಂಡ್‌ಫುಲ್ ಕನ್ಸಲ್ಟಿಂಗ್‌ನ ಸಂಸ್ಥಾಪಕ ಸಂಜಯ್ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಪಿ.ಯು. ಪ್ರಾಂಶುಪಾಲೆ ಲೆ. ವಿಜಯಲಕ್ಷ್ಮಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ಸಂಯೋಜಕಿ ಗಣಕ ಶಾಸ್ತ್ರ ಉಪನ್ಯಾಸಕಿ ಕೀರ್ತಳ ಉಪಸ್ಥಿತರಿದ್ದರು.
ಕೋಡಿಂಗ್ ಕ್ಲಬ್ ವಿದ್ಯಾರ್ಥಿ ಪ್ರತಿನಿಧಿ ಕುಶಾಗ್ರ ಸ್ವಾಗತಿಸಿದರು. ಕಲಾ ವಿಭಾಗದ ವಿದ್ಯಾರ್ಥಿನಿ ನೆಬೀಸತ್ ರಿಹಾನಾ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಗಣಕಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಪ್ರತಿಷ್ಠಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ವಿಭಾಗದ ರಕ್ಷಿತಾ ಶೆಟ್ಟಿ ವಂದಿಸಿದರು.