ಕರ್ನಾಟಕ ಕರಾವಳಿಯ ಕೆಲವು ಪ್ರಮುಖ ಪುರಾತತ್ತ್ವ ನಿವೇಶನಗಳ ತಖ್ತೆ
ಅವಲಕ್ಕಿಪಾರೆ:
ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಇಡೂರು-ಕುಂಜ್ಞಾಡಿ ಗ್ರಾಮ ವ್ಯಾಪ್ತಿಯ, ಕೊಲ್ಲೂರು ವನ್ಯಜೀವಿ ಸಂರಕ್ಷಿತ ಅಭಯಾರಣ್ಯದಲ್ಲಿರುವ ಒಂದು ಪ್ರಮುಖ ಆದಿಮ ಕಲಾ (Rock Art), ನಿವೇಶನವಾಗಿದೆ. ಈ ನಿವೇಶನವನ್ನು ನಾನು ಫೆಬ್ರವರಿ 17 1919 ರಂದು ಸಂಶೋಧಿಸಿ ಪ್ರಕಟಿಸಿರುತ್ತೇನೆ. ನಂತರ, ಇದೇ ನಿವೇಶನದಲ್ಲಿ ದಿನಾಂಕ: 26 ಮತ್ತು 27 ರ ಡಿಸೆಂಬರ್ 2022 ರಂದು, ಎರಡು ದಿನಗಳ ಅಂತರಾಷ್ಟ್ರೀಯ ರಾಕ್ ಆರ್ಟ್ ಫೆಸ್ಟನ್ನು ನಡೆಸಲಾಯಿತು.
ಬುದ್ಧನಜೆಡ್ಡು:
ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ಕೊಲ್ಲೂರು ರಕ್ಷಿತಾರಣ್ಯದ ನಡುವೆ ಇರುವ ಒಂದು ಆದಿಮ ಕಲಾ ನಿವೇಶನ, ಈ ನಿವೇಶನವನ್ನು ನಾನು 2009 ರಲ್ಲಿ ಸಂಶೋಧಿಸಿರುತ್ತೇನೆ. 2010 ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ರಾಕ್ ಆರ್ಟ್ ಸೊಸೈಟಿ ಆಫ್ ಇಂಡಿಯಾದ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಅ. ಸುಂದರ ಮತ್ತು ನಾನು ಜಂಟಿಯಾಗಿ ಸಂಶೋಧನಾ ಪ್ರಬಂಧವನ್ನು ಮಂಡಿಸಿರುತ್ತೇವೆ.
ಬುದ್ಧನಜೆಡ್ಡುವಿನ ಭೀಮನಪಾರೆ ಎಂಬ ಸ್ಥಳದಲ್ಲಿ ಸುಮಾರು ಅರ್ಧ ಎಕರೆ ಜಾಗದಲ್ಲಿ 40 ಕ್ಕಿಂತಲೂ ಹೆಚ್ಚು ಮಾನವ, ಪ್ರಾಣಿ-ಪಕ್ಷಿ, ಮತ್ತು ಜ್ಯಾಮಿತಿಯ ರೇಖಾಕೃತಿಯ ಚಿತ್ರಗಳಿವೆ. ಕರಾವಳಿಯ ಅತ್ಯಂತ ಪ್ರಮುಖ ಆದಿಮ ಕಲಾ ನಿವೇಶನವೆಂದು ಬಹುತೇಕ ಎಲ್ಲಾ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ನಿವೇಶನವನ್ನು ಅಧಿಸೂಚಿತ ಪುರಾತತ್ತ್ವ ನಿವೇಶನವೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆದಿಮ ಕಲಾ ಟ್ರಸ್ಟ್ ಈ ಮೂಲಕ ಕೋರುತ್ತದೆ.
ಗಾವಳಿ:
ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಗಾವಳಿಯಲ್ಲಿ ನೈಸರ್ಗಿಕ ಬಂಡೆಗಳ ಮೇಲೆ ಕಲಾ ಚಿತ್ರಗಳನ್ನು ದಿ. ಡಾ. ಬಿ. ವಸಂತ ಶೆಟ್ಟಿಯವರು 1982 ರಲ್ಲಿ ಸಂಶೋಧಿಸಿ ಪ್ರಕಟಿಸಿದ್ದಾರೆ.
ಈ ನಿವೇಶನದಲ್ಲಿ ಪ್ರಧಾನವಾಗಿ ಗೂಳಿಯ ಚಿತ್ರಗಳು ಕಂಡುಬಂದಿವೆ. 2010 ರಲ್ಲಿ ನಾನು ಅದೇ ನಿವೇಶನದಲ್ಲಿ ನೂತನ ಶಿಲಾಯುಗದ ಕಲ್ಲಿನಾಯುಧಗಳನ್ನು ಶೋಧಿಸಿ ಪ್ರಕಟಿಸಿದ್ದೇನೆ. ಕರಾವಳಿಯ ಅತ್ಯಂತ ಪ್ರಮುಖ ಆದಿಮ ಕಲಾ ನಿವೇಶನವೆಂದು ಬಹುತೇಕ ಎಲ್ಲಾ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ನಿವೇಶನವನ್ನು ಅಧಿಸೂಚಿತ ಪುರಾತತ್ತ್ವ ನಿವೇಶನವೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆದಿಮ ಕಲಾ ಟ್ರಸ್ಟ್ ಈ ಮೂಲಕ ಕೋರುತ್ತದೆ.
ಬರದಕಲ್ಲು ಬೋಳೆ:
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕರೂರು ಸಮೀಪದ ರಕ್ಷಿತಾರಣ್ಯದಲ್ಲಿ ಜಗದೀಶ್ ಅಸೋಡೆ ಮತ್ತು ಮಾಧುರಿ ಚೌಗಳೆಯವರು 2024 ರ ಏಪ್ರಿಲ್‌ನಲ್ಲಿ ಈ ನಿವೇಶನವನ್ನು ಸಂಶೋಧಿಸಿ ಪ್ರಕಟಿಸಿದ್ದಾರೆ. ಈ ನಿವೇಶನದಲ್ಲಿಯೂ ಸಹ ಮಾನವರ, ಪ್ರಾಣಿಗಳ ಹಾಗೂ ರೇಖಾಕೃತಿಗಳ ಚಿತ್ರಗಳು ಕಂಡುಬಂದಿವೆ. ಕರಾವಳಿಯ ಅತ್ಯಂತ ಪ್ರಮುಖ ಆದಿಮ ಕಲಾ ನಿವೇಶನವೆಂದು ಬಹುತೇಕ ಎಲ್ಲಾ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ನಿವೇಶನವನ್ನು ಅಧಿಸೂಚಿತ ಪುರಾತತ್ತ್ವ ನಿವೇಶನವೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆದಿಮ ಕಲಾ ಟ್ರಸ್ಟ್ ಈ ಮೂಲಕ ಕೋರುತ್ತದೆ.
ಮದ್ಮಲ್‌ಪಾದೆ:
ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ಪಳ್ಳಿಯ ಮದ್ಮಲ್‌ಪಾದೆ ಎಂದು ಕರೆಯಲ್ಪಡುವ ಒಂದು ಕಲ್ಲು ಬೆಟ್ಟದ ಮೇಲೆ ಬೃಹತ್ ಶಿಲಾಯುಗದ ಕಲ್ಮನೆ ಸಮಾಧಿ (Dolmen), ನಿವೇಶನವನ್ನು 2013ರಲ್ಲಿ ನಾನು ಸಂಶೋಧಿಸಿ ಪ್ರಕಟಿಸಿರುತ್ತೇನೆ. ಇಲ್ಲಿ ಸಾಧಾರಣ ಸುಸ್ಥಿತಿಯಲ್ಲಿ ಇರುವ ಒಂದು ಕಲ್ಮನೆ ಸಮಾಧಿಯಿದೆ. ಈ ನಿವೇಶನ ಆಕ್ರಮ ಕಲ್ಲು ಗಣಿಗಾರಿಕೆಯಿಂದ ತೀರಾ ಅಪಾಯದಲ್ಲಿದೆ. ಕರಾವಳಿಯ ಅತ್ಯಂತ ಮಹತ್ವದ ಈ ಬೃಹತ್ ಶಿಲಾಯುಗದ ನಿವೇಶನವನ್ನು ಅಧಿಸೂಚಿತ ಪುರಾತತ್ತ್ವ ನಿವೇಶನವೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆದಿಮ ಕಲಾ ಟ್ರಸ್ಟ್ ಈ ಮೂಲಕ ಕೋರುತ್ತದೆ.
ಮೂಡುಕೋಣಾಜೆ:
ದಕ್ಷಿಣ ಕನ್ನಡ ಜಿಲ್ಲೆ, ಮೂಡುಬಿದರೆ ತಾಲೂಕಿನ ಮೂಡುಕೋಣಾಜೆಯ ಮೋರಿಯರ ಬೆಟ್ಟದಲ್ಲಿರುವ ಬೃಹತ್ ಶಿಲಾಯುಗದ ಕಲ್ಮನೆ ಸಮಾಧಿ (Dolmen), ನಿವೇಶನವನ್ನು 1970ರಲ್ಲಿ ದಿ. ಡಾ. ಪಾದೂರು ಗುರುರಾಜ ಭಟ್ಟರು ಸಂಶೋಧಿಸಿ ಪ್ರಕಟಿಸಿರುತ್ತಾರೆ.
ಈ ನಿವೇಶನದಲ್ಲಿ ಎರಡು ಕಲ್ಮನೆ ಸಮಾಧಿಗಳು ಇವೆ. ಇದೇ ನಿವೇಶನದಲ್ಲಿ ನಾನು, ತೀರಾ ಇತ್ತೀಚಿಗೆ ಸುಟ್ಟ ಆವಿಗೆ ಮಣ್ಣಿನ (Terracotta) ಗೊಂಬೆಗಳು ಹಾಗೂ ಇತರೆ ಪ್ರಾಚ್ಯಾವಶೇಷಗಳನ್ನು ಸಂಶೋಧಿಸಿದ್ದೇನೆ. ಕರಾವಳಿಯ ಅತ್ಯಂತ ಮಹತ್ವದ ಈ ಬೃಹತ್ ಶಿಲಾಯುಗದ ನಿವೇಶನವನ್ನು ಅಧಿಸೂಚಿತ ಪುರಾತತ್ತ್ವ ನಿವೇಶನವೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆದಿಮ ಕಲಾ ಟ್ರಸ್ಟ್ ಈ ಮೂಲಕ ಕೋರುತ್ತದೆ.
