ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಟೆಕ್ಫಿನಿಟಿ’ ಟೆಕ್‌ಕ್ಲಬ್ ಉದ್ಘಾಟನೆ
ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಬೆಂಗಳೂರಿನ ಸುಬೆಕ್ಸ್‌ನಲ್ಲಿ ಸೀನಿಯರ್ ಟೆಕ್ನಿಕಲ್ ಟ್ರೈನರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಯಶಸ್ವಿ ಕೆಎಸ್ ಅವರು ‘ಉದ್ಯೋಗಕ್ಷೇತ್ರದಲ್ಲಿ ಪ್ರಗತಿಹೊಂದಬೇಕಾದಲ್ಲಿ ವಿದ್ಯಾರ್ಥಿದೆಸೆಯಲ್ಲಿಯೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಈ ರೀತಿಯ ಕ್ಲಬ್‌ಗಳ ಚಟುವಟಿಕೆಗಳಲ್ಲಿ ಭಾಗವಿಸಿದ್ದಲ್ಲಿ ನಮ್ಮ ಆತ್ಮವಿಶ್ವಾಸವು ಹೆಚ್ಚುತ್ತದೆ ತನ್ಮೂಲಕ ನಮ್ಮನ್ನು ಔದ್ಯೋಗಿಕ ಕ್ಷೇತ್ರದ ಸವಾಲುಗಳಿಗೆ ಅಣಿಗೊಳಿಸುತ್ತದೆ, ಕಾಲೇಜಿನಲ್ಲಿ ದೊರೆಯುವ ಪ್ರತಿಯೊಂದು ಅವಕಾಶಗಳನ್ನೂ ಸದುಪಯೋಗಗೊಳಿಸಿದಲ್ಲಿ ನಮ್ಮ ಆತ್ಮವಿಶ್ವಸವು ವೃದ್ಧಿಯಾಗುತ್ತದೆ ಎಂದು ಹೇಳಿ ತಾವು ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಹಾಗೂ ವೃತ್ತಿಜೀವನವನ್ನು ಪ್ರಾರಂಭಿಸಿದ ಸಂದರ್ಭದ ಸವಿನೆನಪುಗಳನ್ನು ಹಂಚಿಕೊಂಡರು.
ಪ್ರಥಮ ಎಂಸಿಎ ತರಗತಿಯ ಅನನ್ಯ ಮತ್ತು ಬಳಗ ಪ್ರಾರ್ಥಿಸಿದರು. ‘ಟೆಕ್ಫಿನಿಟಿ’ ಟೆಕ್ ಕ್ಲಬ್‌ನ ಅಧ್ಯಕ್ಷೆ ಹರಿಣಾಕ್ಷಿ ಸ್ವಾಗತಕೋರಿದರು. ‘ಟೆಕ್ಫಿನಿಟಿ’ ಟೆಕ್ ಕ್ಲಬ್‌ನ ಕಾರ್ಯದರ್ಶಿ ಪೂಜಾ ಎನ್. ಟೆಕ್ ಕ್ಲಬ್ ವತಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸಲ್ಪಡುವ ಕಾರ್ಯಕ್ರಮಗಳ ವಿವರ ನೀಡಿದರು.
ದ್ವಿತೀಯ ಎಂಸಿಎಯ ಶಿಲ್ಪಾ ರೈ ಎಂ. ವಂದಿಸಿದರು. ಚೈತನ್ಯ ಕೆ. ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಡೀನ್ ಹಾಗೂ ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಡಾ. ವಿನಚಯಂದ್ರ ಹಾಗೂ ‘ಟೆಕ್ಫಿನಿಟಿ’ ಟೆಕ್ ಕ್ಲಬ್‌ನ ನಿರ್ದೇಶಕಿ ಅಕ್ಷತಾ ಬಿ. ಉಪಸ್ಥಿತರಿದ್ದರು.
‘ಟೆಕ್ಫಿನಿಟಿ’ ಟೆಕ್‌ಲ್ಲಬ್‌ನಲ್ಲಿ ಎಐ ಸೆಲ್, ಸೈಬರ್ ಸೆಕ್ಯುರಿಟಿ ಹಬ್, ಡಾಟಾ ಸಯನ್ಸ್ ಫಾರಮ್ ಹಾಗೂ ಐಒಟಿ ಕ್ಲಬ್ ಎಂಬ ನಾಲ್ಕು ಘಟಕಗಳಿದ್ದು, ಚೈತನ್ಯ ಹಾಗೂ ವೈಶಾಲಿ ಪಿ., ನಿರೀಕ್ಷಾ ಆರ್. ಮತ್ತು ಅಪೂರ್ವ ಕೆ., ಶ್ರೇಯಾ ಎಸ್.ಆರ್. ಮತ್ತು ಚೈತನ್ಯ ಕೆ. ಹಾಗೂ ಶಿಲ್ಪ ರೈ ಎಂ. ಮತ್ತು ನಿರ್ಮಿತಾ ಆರ್. ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


