ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಫ್ರಾಕ್ಟಲ್ಸ್ ಮತ್ತು ಪ್ಯಾಟರ್ನ್ಸ್: ಸಮಮಿತಿ ಮತ್ತು ಸೌಂದರ್ಯದ ಗಣಿತ’ ಉಪನ್ಯಾಸ
ಸಂಪನ್ಮೂಲ ವ್ಯಕ್ತಿಯಾಗಿದ್ದ (ಎನ್‌ಎಂಎಎಂಐಟಿ) ನಿಟ್ಟೆಯ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ವಾಸುದೇವ ಆಚಾರ್ಯ ಮಾತನಾಡಿ, ಪ್ರಕೃತಿ ಮತ್ತು ಮಾನವ ನಿರ್ಮಿತಿಗಳಲ್ಲಿ ಸಮಿತಿ ಮತ್ತು ಪ್ಯಾಟರ್ನ್ಸ್‌ನ ಸೌಂದರ್ಯವನ್ನು ವಿವರಿಸಿ ದೇವಸ್ಥಾನಗಳು, ಪರ್ವತಗಳು, ಚರ್ಚುಗಳು ಹಾಗೂ ಆಹಾರದ ವಿನ್ಯಾಸಗಳಲ್ಲಿ ಕಂಡುಬರುವ ಗಣಿತದ ನಿದರ್ಶನಗಳನ್ನು ಉಲ್ಲೇಖಿಸಿದರು.
ಗಣಿತವು ಜಗತ್ತಿನಲ್ಲಿ ಸೌಹಾರ್ದತೆ ಮತ್ತು ಸಮತೋಲನವನ್ನು ರೂಪಿಸುತ್ತದೆ, ಅದು ಕೇವಲ ಅಂಕಿಗಳ ವಿಷಯವಲ್ಲ, ಅಲಂಕಾರಶಾಸ್ತ್ರದ ಪ್ರೇರಣೆಯೂ ಆಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಸುತ್ತಮುತ್ತಲಿನ ಪ್ಯಾಟರ್ನ್ಸ್‌ಗಳನ್ನು ಗಮನಿಸಿ ಮೆಚ್ಚುವಂತೆ ಪ್ರೇರೇಪಿಸಿದರು.
ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಸಂಯೋಜಕ ಪ್ರೊ. ಗಣೇಶ್ ಭಟ್ ಕೆ., ಪ್ರಕೃತಿ, ಕಲಾ ಮತ್ತು ವಿಜ್ಞಾನಗಳಲ್ಲಿ ಕಂಡುಬರುವ ಫ್ರಾಕ್ಟಲ್ಸ್ ಮತ್ತು ಅವುಗಳ ಪ್ಯಾಟರ್ನ್ಸ್ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಡಾ. ಎಡ್ವಿನ್ ಡಿಸೋಜಾ (ಐಕ್ಯೂಎಸಿ ಸಂಯೋಜಕ), ಪೂಜಾಶ್ರೀ ವಿ. ರೈ (ಸಹ ಪ್ರಾಧ್ಯಾಪಕಿ, ಭೌತಶಾಸ್ತ್ರ ವಿಭಾಗ), ಮನೋಹರ ಎಸ್.ಜಿ. (ಸ್ನಾತಕೋತ್ತರ ಗ್ರಂಥಪಾಲಕ), ಹಾಗೂ ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕರಾದ ರಕ್ಷಿತಾ ಕೆ. ಶೆಟ್ಟಿ, ಪ್ರತೀಕ್ಷಾ, ದೀಪಿಕಾ ಮತ್ತು ಅಂಜು ಜೇಮ್ಸ್ ಉಪಸ್ಥಿತರಿದ್ದರು. ಬಿಎಸ್ಸಿ ಮತ್ತು ಎಂಎಸ್ಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬಿಎಸ್ಸಿ ವಿದ್ಯಾರ್ಥಿನಿ ಅಪರ್ಣಾ ಮತ್ತು ತಂಡ ಪ್ರಾರ್ಥನೆ ನೆರವೇರಿಸಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ತನುಜಾ ಎನ್.ಪಿ ಸ್ವಾಗತಿಸಿ, ಪಿ.ಜಿ ಗಣಿತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ದೀಪಿಕಾ ವಂದನೆ ಸಲ್ಲಿಸಿ, ಪ್ರಥಮ ಎಂ.ಎಸ್ಸಿ ವಿದ್ಯಾರ್ಥಿನಿ ಅಪೇಕ್ಷಾ ಸಿ. ಕಾರ್ಯಕ್ರಮವನ್ನು ನಿರೂಪಿಸಿದರು.

