ಇಎನ್‌ಟಿ ಕ್ಲಿನಿಕ್ ಸಿಬ್ಬಂದಿಗೆ ಹಲ್ಲೆ: ಆರೋಪಿಯ ಬಂಧನ

ಇಎನ್‌ಟಿ ಕ್ಲಿನಿಕ್ ಸಿಬ್ಬಂದಿಗೆ ಹಲ್ಲೆ: ಆರೋಪಿಯ ಬಂಧನ

ಪುತ್ತೂರು: ನಗರದ ದರ್ಬೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಎನ್ಟಿ ಕ್ಲಿನಿಕ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಕ್ಲಿನಿಕ್‌ನ ಪೀಠೋಪಕರಣಗಳಿಗೆ ಹಾನಿ ಉಂಟು ಮಾಡಿರುವ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ ಇಬ್ರಾಹೀಂ ಬಂಧಿತ ಆರೋಪಿ. ಕ್ಲಿನಿಕ್ ಸಿಬ್ಬಂದಿ ಶ್ರೀಕಾಂತ್ ಹಲ್ಲೆಗೆ ಒಳಗಾದವರು.

ಕ್ಲಿನಿಕ್‌ನಲ್ಲಿ ಪ್ರತಿದಿನ ಬೆಳಗ್ಗೆ ಬೇಗ ಚಿಕಿತ್ಸೆ ಪಡೆಯಲು ಆಗಮಿಸುವವರಿಗೆ ಟೋಕನ್ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 6.30ರ ಹೊತ್ತಿಗೆ ಬಂದ ವ್ಯಕ್ತಿಯೊಬ್ಬರು ತಮ್ಮ ಪರಿಚಯಸ್ಥರಿಗೆ ಆದ್ಯತೆ ನೀಡುವಂತೆ ಸಿಬ್ಬಂದಿಗೆ ಒತ್ತಾಯಿಸಿದ್ದಾರೆ. ಸಿಬ್ಬಂದಿ ಟೋಕನ್ ಪ್ರಕಾರವೇ ಕಳುಹಿಸುವುದಾಗ ತಿಳಿಸಿದಾಗ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆ ವ್ಯಕ್ತಿ ಕ್ಲಿನಿಕ್ ಸಿಬ್ಬಂದಿ ಮೇಲೆ ನಡೆಸಿದ್ದಲ್ಲದೆ, ಕ್ಲಿನಿಕ್ ನ ಪೀಠೋಪಕರಣಗಳಿಗೂ ಹಾನಿ ಉಂಟು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಕ್ಲಿನಿಕ್ ವೈದ್ಯ ಡಾ. ರಾಮಮೋಹನ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆಯ ಪೊಲೀಸರು ಆರೋಪಿ ಇಬ್ರಾಹೀಂನನ್ನು ಬಂಧಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article