ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೀದಿ ಮಡೆ ಸ್ನಾನ ಆರಂಭ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೀದಿ ಮಡೆ ಸ್ನಾನ ಆರಂಭ


ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಠಿ ಜಾತ್ರೋತ್ಸವದ ಅಂಗವಾಗಿ ಬುಧವಾರ ಲಕ್ಷ ದೀಪೋತ್ಸವ ನಡೆದು ತದನಂತರದಲ್ಲಿ ಬೀದಿ ಮಡೆ ಸ್ನಾನ ಆರಂಭವಾಯಿತು. 

ಕುಕ್ಕೆ ಕ್ಷೇತ್ರಕ್ಕೆ ಭಕ್ತಾದಿಗಳು ಸಲ್ಲಿಸುವ ಅತಿ ದೊಡ್ಡ ಹರಿಕೆಗಳಲ್ಲಿ ಬೀದಿ ಮಡೆ ಸ್ನಾನವು ಪ್ರಮುಖ ಸೇವೆಯಾಗಿದೆ. ಹರಕೆಯನ್ನು ಹೊತ್ತ ಭಕ್ತರು ಕುಮಾರಧಾರ ಸ್ಥಾನಗಟ್ಟದಲ್ಲಿ ಮಿಂದು ಅಲ್ಲಿಂದಲೇ ಸುಮಾರು ಎರಡುವರೆ ಕಿಲೋಮೀಟರ್ ಮುಖ್ಯರಸ್ತೆಯಲ್ಲಿ ಉರುಳುತ್ತಾ ಬಂದು ಶ್ರೀ ದೇವಳದ ಅಂಗಣದಲ್ಲಿ ಒಂದು ಸುತ್ತು ಪ್ರದಕ್ಷಿಣೆ ಬಂದು ನಂತರ ದರ್ಪಣ ತೀರ್ಥದಲ್ಲಿ ಮಿಂದು ಎದ್ದೇಳುತ್ತಾರೆ. ತದನಂತರ ಶ್ರೀ ದೇವರ ಪ್ರಸಾದ ಸ್ವೀಕರಿಸಿ ಸಂತುಷ್ಟರಾಗುತ್ತಾರೆ.

ಇದು ವರ್ಷಂ ಪ್ರತಿ ಚಂಪಾ ಸಷ್ಟಿ ಜಾತ್ರೋತ್ಸವದ ಸಂದರ್ಭದಲ್ಲಿ ಲಕ್ಷ ದೀಪ ಮಹೋತ್ಸವದ ನಂತರ ಚಂಪಾ ಸಷ್ಟಿ ಜಾತ್ರೆಯವರೆಗೆ ನಿರಂತರವಾಗಿ ನಡೆಯುವ ಸೇವೆಯಾಗಿದೆ. ಹೆಚ್ಚಾಗಿ ಬೀದಿ ಉರುಳು ಸೇವೆ ಮಾಡುವ ಭಕ್ತರು ಬೆಳಗ್ಗೆಯ ನಸುಕಿನ ಹೊತ್ತಿನಲ್ಲಿ ಅಥವಾ ಸಂಜೆಯ ಹೊತ್ತಿನಲ್ಲಿ ಸೇವೆ ಸಲ್ಲಿಸುತ್ತಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article