ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಟಿ ಬ್ರಹ್ಮರಥೋತ್ಸವ ಸಂಪನ್ನ.
ಬೆಳಗ್ಗೆ ಗಂಟೆ 7.29ರ ವೃಶ್ಚಿಕ ಲಗ್ನ ಸುಮೂರ್ತದಲ್ಲಿ ಶ್ರೀ ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತಾಯ ಅವರು ಶ್ರೀ ದೇವಳದಲ್ಲಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಅಲಂಕಾರಗೊಂಡ ಪಲ್ಲಕ್ಕಿಯಲ್ಲಿ ಉಮಾಮಹೇಶ್ವರ ದೇವರುಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರುಗಳನ್ನು ವೈಭವದ ಮಂಗಳವಾದ್ಯ, ಸೆಕ್ಸಾ ಫೋನ್, ಬ್ಯಾಂಡ್, ವಾದ್ಯಗಳ ಹಾಗೂ ಚಂಡೆಯ ನಾದದೊಂದಿಗೆ ರಥ ಬೀದಿಗೆ ಬಂದು ಉಮಾಮಹೇಶ್ವರ ದೇವರನ್ನ ಪಂಚಮಿ ರಥದಲ್ಲಿಯೂ,ಸುಬ್ರಹ್ಮಣ್ಯ ದೇವರನ್ನು ಬ್ರಹ್ಮರಥದಲ್ಲಿಯೂ ಆ ಸೀನಗೊಳಿಸಿದರು.
ಭಕ್ತಾದಿಗಳು ನಾಣ್ಯ, ಕಾಳುಮೆಣಸು, ಸಾಸಿವೆಗಳನ್ನ ರಥಕ್ಕೆ ಎಸೆದರು. ಹಾಗೆಯೇ ಶ್ರೀದೇವದ ಪ್ರಧಾನ ಅರ್ಚಕರು ರಥೋತ್ಸವದ ಬಳಿಕ ಭಕ್ತಾದಿಗಳಿಗೆ ನಾಣ್ಯ,ಕನಕ,ಹೂವು ಫಲವಸ್ತು ಪ್ರಸಾದಗಳನ್ನು ರಥದಿಂದ ಎಸೆದರು.
ರಥ ಎಳೆಯಲು ಪಾಸ್:
ವರ್ಷದಲ್ಲಿ ಒಂದು ಬಾರಿ ಬ್ರಹ್ಮರಥೋತ್ಸವ ದಲ್ಲಿ ರಥ ಎಳೆಯಲು ನೂಕು ನುಗ್ಗಲು ಉಂಟಾಗುವುದನ್ನು ನಿಯಂತ್ರಿಸಲು ಬ್ರಹ್ಮರಥ ಸೇವಾರ್ಥಿಗಳಿಗೆ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಹಾಗೆ ಬ್ರಹ್ಮರಥ ಸೇವೆ ಮಾಡಿದವರಿಗೆ ಶ್ರೀ ದೇವರ ಪ್ರಸಾದವನ್ನು ಪ್ರಧಾನ ಅರ್ಚಕರು ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಿದರು
