ಕಾಡಾನೆ ಓಡಾಟ: ಮಿತ್ತಬಾಗಿಲು ಗ್ರಾ.ಪಂ.ನಿಂದ ಎಚ್ಚರಿಕೆ
Thursday, November 6, 2025
ಉಜಿರೆ: ಮಿತ್ತಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗೆ, ಗಣೇಶನಗರ, ಬೆಡಿಗುತ್ತು, ದಿಡುಪೆ ಪರಿಸರದಲ್ಲಿ 5 ಕಾಡಾನೆಗಳು ಓಡಾಡುತ್ತಿದ್ದು, ಈ ಪ್ರದೇಶದ ಜನರು ಯಾವುದೇ ಕಾರಣಕ್ಕೂ ಹಗಲಲ್ಲಿ ಒಂಟಿಯಾಗಿ ಕಾಡಿಗೆ ಹೋಗುವುದು ಮತ್ತು ರಾತ್ರಿ ವೇಳೆ ತೋಟಗಳಿಗೆ ಹೋಗಬಾರದು ಎಂಬುದಾಗಿ ಮಿತ್ತಬಾಗಿಲು ಗ್ರಾ.ಪಂ. ಪಿಡಿಒ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕಸ್ಮಾತ್ ಆನೆಗಳು ಕಂಡು ಬಂದಲ್ಲಿ ತಕ್ಷಣ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ವಿನಂತಿಸಿಕೊಂಡಿದ್ದಾರೆ.