ಬಂಟ್ವಾಳ: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ದ.ಕ. ಜಿಲ್ಲೆ ಮತ್ತು ವಿವೇಕಾನಂದ ಪದವಿ ಪೂರ್ವ ಕಾಲೇಜು ಎಡಪದವು ಇದರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಬಾಲಕ, ಬಾಲಕಿಯರ ಕರಾಟೆ ಸ್ಪರ್ಧೆಯಲ್ಲಿ ಬಾಲಕರ ವಿಭಾಗದ 52 ಕೆ.ಜಿ ವಿಭಾಗದಲ್ಲಿ ಶ್ರೀ ರಾಮ ಪದವಿ ಪೂರ್ವ ಕಾಲೇಜಿನ ಶ್ರವಣ್ ಕಡೆಗೋಳಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.