ವಿವಾಹ ಸಂಭ್ರಮದಲ್ಲಿದ್ದ ಹೆತ್ತವರಿಗೆ ಮಗಳಿಂದ ಶಾಕ್: ಚಿನ್ನಾಭರಣ, ಉಡುಗೊರೆಯೊಂದಿಗೆ ಪರಾರಿ ಶಂಕೆ

ವಿವಾಹ ಸಂಭ್ರಮದಲ್ಲಿದ್ದ ಹೆತ್ತವರಿಗೆ ಮಗಳಿಂದ ಶಾಕ್: ಚಿನ್ನಾಭರಣ, ಉಡುಗೊರೆಯೊಂದಿಗೆ ಪರಾರಿ ಶಂಕೆ

ಬಂಟ್ವಾಳ: ವಿವಾಹದ ಸಂಭ್ರಮದಲ್ಲಿದ್ದ ವಧುವೋರ್ವಳು ಬೆಳ್ಳಂಬೆಳಗ್ಗೆ ಹೆತ್ತವರು, ಕುಟುಂಬಸ್ಥರಿಗೆ ಶಾಕ್ ನೀಡಿದ ಘಟನೆ ಬಿ.ಸಿ. ರೋಡಿಗೆ ಸಮೀಪದ ಪಲ್ಲಮಜಲಿನಲ್ಲಿ ನಡೆದಿದೆ.

ನಿಕಾಹ್ ಮುಗಿಸಿ ಔತಣಕೂಟಕ್ಕೆ ಸಜ್ಜಾಗಿದ್ದ ಮದುಮಗಳು ಅಶ್ಪಿಯ (21) ವರನ ಕಡೆಯವರು ನೀಡಿದ್ದ ಚಿನ್ನಾಭರಣ ಹಾಗೂ ದುಬಾರಿ ಉಡುಗೊರೆಯೊಂದಿಗೆ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆಂದು ಶಂಕಿಸಲಾಗಿದೆ.

ಮಧುಮಗಳು ನಾಪತ್ತೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲು, ವರನ ಕಡೆಯವರು ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಈ ಹಠಾತ್ ಘಟನೆ ವಧು-ವರನ ಮನೆಯವರನ್ನು ಅಘಾತಕ್ಕೆ ತಳ್ಳಿದೆ.

ಘಟನೆಯ ವಿವರ:

ಡಿ.12 ರಂದು ಈ ಜೋಡಿಗೆ ನಿಕಾಹ್ ಶಾಸ್ತ್ರೋಕ್ತವಾಗಿ ನೆರವೇರಿತ್ತು. ಡಿ.14 ರಂದು ಮಂಗಳೂರು ತೊಕ್ಕೊಟ್ಟುವಿನ ಯುನಿಟಿ ಹಾಲ್‌ನಲ್ಲಿ ಮದುವೆ ಸಮಾರಂಭ ಮತ್ತು ಔತಣಕೂಟ ನಡೆಯಬೇಕಿತ್ತು. ಮನೆಯವರೆಲ್ಲರೂ ಸಂಭ್ರಮದ ಸಿದ್ಧತೆಯಲ್ಲಿದ್ದಾಗಲೇ ಮದುಮಗಳು ನಾಪತ್ತೆಯಾಗಿ ಶಾಕ್ ನೀಡಿದ್ದಾಳೆ.

ಭಾನುವಾರ ಬೆಳಗ್ಗಿನ ಜಾವ 3.30 ರ ಹೊತ್ತಿಗೆ ಮಲಗಿದ್ದು, ಈಕೆ ಬೆಳಗ್ಗೆ 4.30 ವೇಳೆಗೆ ಆಕೆ ಮಲಗಿದ್ದ ಕೋಣೆ ನೋಡಿದಾಗ ಅಶ್ಪಿಯ ಮಲಗಿದ ಜಾಗದಲ್ಲಿಲ್ಲದಿದ್ದು, ಬಳಿಕ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಲಿಲ್ಲ ಎಂದು ಆಕೆಯ ಸಹೋದರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಅಶ್ಪಿಯ ವರನ ಕಡೆಯವರು ಉಡುಗೊರೆಯಾಗಿ ನೀಡಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ದುಬಾರಿ ಮೊಬೈಲ್, ಹಾಗೂ ಐಷಾರಾಮಿಯಾದ ಗಿಪ್ಟ್ ಐಟಂಗಳನ್ನು ಹೊತ್ತೊಯ್ದಿದ್ದಾಳೆನ್ನಲಾಗಿದೆ.

ಸಧ್ಯ ಮಧುಮಗಳ ಸುಳಿವು ಲಭ್ಯವಾಗದಿದ್ದು, ಪ್ರಿಯಕರ ಯಾರೆಂಬುದು ಕೂಡ ರಹಸ್ಯವಾಗಿಯೇ ಉಳಿದಿದೆ. ಪೊಲೀಸರು ಈಕೆಯ ಪತ್ತೆಗಾಗಿ ಶೋಧಕಾರ್ಯ ನಡೆಸುತ್ತಿದ್ದರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article