ಕರಾವಳಿ ಜನರ ಸ್ವಾಭಿಮಾನ ಕೆಣಕಿದ ಕಾಂಗ್ರೆಸ್ ಸರಕಾರ: ಬೃಜೇಶ್ ಚೌಟ

ಕರಾವಳಿ ಜನರ ಸ್ವಾಭಿಮಾನ ಕೆಣಕಿದ ಕಾಂಗ್ರೆಸ್ ಸರಕಾರ: ಬೃಜೇಶ್ ಚೌಟ


ಬಂಟ್ವಾಳ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಠಾಚಾರ, ಜನವಿರೋಧಿ ಕಾರ್ಯಕ್ರಮಗಳು ದುಪ್ಪಟ್ಟಾಗಿದ್ದು ಸರಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ ಎನ್ನುವುದು ಸಾಬೀತಾಗಿದೆ. ಬೆಂಕಿ ಹಚ್ಚುವವರು ಎನ್ನುವ ಮೂಲಕ ಮೂಲಕ ಕರಾವಳಿ ಜನರ ಸ್ವಾಭಿಮಾನವನ್ನು ಕೆಣಕುವ ಪ್ರಯತ್ನ ಕಾಂಗ್ರೆಸ್ ಸರಕಾರದಿಂದಾಗಿದ್ದು, ಮುಂಬರುವ ಜಿ.ಪಂ., ತಾ.ಪಂ., ನಗರ ಮತ್ತು ಸ್ಥಳೀಯಾಡಳಿತ ಸಂಸ್ಥೆಯ ಚುನಾವಣೆಯಲ್ಲಿ ಯಾರೂ ಬೆಂಕಿ ಹಚ್ಚುವವರು ಎನ್ನುವುದನ್ನು ಕರಾವಳಿಯ ಜನತೆ ತೋರಿಸಿಕೊಡಬೇಕು ಎಂದು ಸಂಸದ ಬೃಜೇಶ್ ಚೌಟ ಹೇಳಿದರು.

ಮುಂಬರುವ ಚುನಾವಣೆ ಹಾಗೂ ಮತದಾರ ಪಟ್ಟಿ ಪರಿಷ್ಕರಣೆಯ ಹಿನ್ನಲೆಯಲ್ಲಿ ಬಿ.ಸಿ. ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಶನಿವಾರ ನಡೆದ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನವಿರೋಧಿ, ಹಿಂದೂ ವಿರೋಧಿ ನೀತಿಯ ಆಡಳಿತ ನಡೆಸುತ್ತಿದೆ, ಬಡ ಜನರ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲದ ಲಜ್ಜೆಗೆಟ್ಟ  ಸರಕಾರ ಕೇಂದ್ರದ ಜನಪರವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಟೀಕಾಪ್ರಹಾರಗೈದರು.

ಬಿಜೆಪಿ ಕಾರ್ಯಕರ್ತರಿಗೆ ವಿಶೇಷ ವರ್ಷ. ಅಟಲ್ ವಾಜಪೇಯಿಯವರ ಜನ್ಮಶತಾಬ್ದಿ ವರ್ಷ. ವಂದೇ ಮಾತರಂಗೆ 150 ತುಂಬಿದ ವರ್ಷ, ಆರ್‌ಎಸ್‌ಎಸ್‌ಗೆ 100ನೇ ವರ್ಷ. ಈಗ ನಮ್ಮ ವೈಚಾರಿಕ ವಿಚಾರಧಾರೆಗಳನ್ನು ಅನುಷ್ಠಾನ ಮಾಡುವ ಸರಕಾರ ಬಂದಿದೆ. ಕೇಂದ್ರ ಸರಕಾರ ಜನವಿಶ್ವಾಸ್ ಬಿಲ್ ಜಾರಿಗೆ ತಂದು ಜನರ ಬದುಕನ್ನು ಉತ್ತಮ ಪಡಿಸಿ ಅವರನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಆಗಲಿದೆ ಎಂದರು.

ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. 

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪ್ರ.ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯತೀಶ್ ಆಳ್ವ, ಉಪಾಧ್ಯಕ್ಷೆ ಪೂಜಾ ಪೈ, ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ ಬಾಳಿಕೆ, ದಿನೇಶ್ ಅಮ್ಟೂರು, ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಹರೀಶ್ ಶೆಟ್ಟಿ ಪಡು ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article