ಬೇಕರಿಯಿಂದ ನಗದು ಕಳವು
Monday, December 22, 2025
ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಜಂಕ್ಷನ್ ಬಳಿರುವ ಬೇಕರಿಯೊಂದರ ಹಿಂಬದಿಯ ಕಬ್ಬಿಣದ ಬಲೆಯನ್ನು ಹರಿದು ಹಾಕಿ ಅಂಗಡಿಯ ಒಳ ಪ್ರವೇಶಿಸಿ ನಗದು ಹಣ ಕಳವುಗೈದಿರುವ ಘಟನೆ ನಡೆದಿದೆ.
ಕುಕ್ಕಾಜೆ ಜಂಕ್ಷನ್‌ನಲ್ಲಿರುವ ಲೀವಿಸ್ ಕಾಂಪ್ಲೆಕ್ಸನ ಕುಕ್ಕಾಜೆ ಸ್ವೀಟ್ಸ್ ಬೇಕರಿಯಲ್ಲಿ ಈ ಕಳವು ಕೃತ್ಯ ನಡೆದಿದೆ. ಅಂಗಡಿಯಲ್ಲಿ ಡಬ್ಬದಲ್ಲಿಟ್ಟಿದ್ದ ನಗದು 70 ಸಾ.ರೂ. ಹಣವನ್ನು ಕಳ್ಳತನ ಮಾಡಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.