ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಳದಲ್ಲಿ ‘ವೈಕುಂಠ ಏಕಾದಶಿ’ ನೂರಾರು ಸಂಖ್ಯೆಯಲ್ಲಿ ದೇವರದರ್ಶನ ಪಡೆದ ಭಕ್ತರು

ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಳದಲ್ಲಿ ‘ವೈಕುಂಠ ಏಕಾದಶಿ’ ನೂರಾರು ಸಂಖ್ಯೆಯಲ್ಲಿ ದೇವರದರ್ಶನ ಪಡೆದ ಭಕ್ತರು


ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ‘ವೈಕುಂಠ ಏಕಾದಶಿ’ ಕಾರ್ಯಕ್ರಮ ಸಂಭ್ರಮದಿಂದ  ನಡೆಯಿತು.

ಬೆಳಗ್ಗೆ 6 ಗಂಟೆಗೆ ಶ್ರೀ ದೇವರ ಗರ್ಭಗೃಹದ ಬಾಗಿಲು ತೆರೆದ ಬಳಿಕ ದೇವಳದ ಪ್ರಧಾನ ಅರ್ಚಕರು ದೀಪ ಪ್ರಜ್ವಲನೆಗೈದರು. ನಂತರ ವಿಶೇಷವಾಗಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ನಿರ್ಮಲ ವಿಸರ್ಜನೆ ಪೂಜೆ ನೆರವೇರಿತು.

ಬೆಳಗ್ಗೆ 7.30ಕ್ಕೆ ವಿವಿಧ ಆರಂಭಗೊಂಡ ಭಜನಾ ಸಂಕೀರ್ತನೆಗೆ ರಾತ್ರಿ 9 ಗಂಟೆಗೆ ಮಂಗಳ ಹಾಡಲಾಯಿತು. ಈ ಸಂದರ್ಭ ಭಕ್ತರಿಗೆ ದೇವಳದ ಉತ್ತರ ದ್ವಾರದ ಮೂಲಕ ಶ್ರೀ ದೇವರ ದರ್ಶನದಭಾಗ್ಯವನ್ನು ನೀಡಲಾಯಿತು.

ಮಧ್ಯಾಹ್ನದ ಪೂಜೆಯ ಬಳಿಕ ಮುಚ್ಚಿದ ಶ್ರೀ ದೇವರ ಗರ್ಭಗೃಹದ ಬಾಗಿಲನ್ನು ಸಂಜೆ 6 ಗಂಟೆಗೆ ತೆರೆಯಲಾಯಿತು. 6.30 ದೀಪ ನಮಸ್ಕಾರ, ರಾತ್ರಿ 9 ಗಂಟೆ ಪೂಜೆಯ ಬಳಿಕ ಭಗವದ್ಬಕ್ತರಿಗೆ ಫಲಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಬೆಳಗ್ಗಿನಿಂದಲೇ ನೂರಾರು ಸಂಖ್ಯೆಯಲ್ಲಿ ಭಗವದ್ಬಕ್ತರು ಶ್ರೀ ತಿರುಮಲ ವೆಂಜಟರಮಣ ದೇವರ ದರ್ಶಮ ಪಡೆದು ಪುನೀತರಾದರು. ದೇವಳದ ಹೊರಾಂಗಣ ಮತ್ತು ಒಳಾಂಗಣವನ್ನು ಹೂವಿನಿಂದ ಸುಂದರವಾಗಿ ಅಲಾಂಕೃತ ಗೊಳಿಸಲಾಗಿತ್ತು. ದೇವಳದ ಆಡಳಿತ ಮೊಕ್ತೇಸರರು, ಮೊಕ್ತೇಸರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article