ವಿಜ್ಞಾನ ಮಾದರಿ ಸ್ಪರ್ಧೆ: ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ
Wednesday, December 17, 2025
ಬಂಟ್ಚಾಳ: ಶಿಕ್ಷಣ ಇಲಾಖೆ ಹಾಗೂ ಎಂಪ್ರೆಸ್ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ತುಮಕೂರು ಇವರ ಜಂಟಿ ಆಶ್ರಯದಲ್ಲಿ ಜರುಗಿದ ರಾಜ್ಯಮಟ್ಟದ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಬಿ.ಸಿ. ರೋಡಿನ ಮೊಡಂಕಾಪು ಕಾರ್ಮೆಲ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಕೃಷ್ಣ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಇವರು ಬಿ.ಸಿ. ರೋಡಿನ ಸತೀಶ್ ಬಂಗೇರ ಮತ್ತು ಜ್ಯೋತಿ ಮುಜಂಗಾವು ದಂಪತಿಯ ಪುತ್ರ.