ಎಚ್ಚರಿಕೆ ವಹಿಸಲು ಮೆಸ್ಕಾಂ ಸೂಚನೆ
ಕಾರ್ಕಳ: ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿ ಎಂಬಲ್ಲಿ ಹೊಸದಾಗಿ ನಿರ್ಮಾಣಗೊಂಡ 33 ಕೆವಿ ವಿದ್ಯುತ್ ಉಪಕೇಂದ್ರಕ್ಕೆ, ವಿದ್ಯುತ್ ಪೂರೈಕೆ ಮಾಡಲು ಹಾಲಿ ಇರುವ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊಸದಾಗಿ 33 ಕೆವಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣಗೊಂಡಿದ್ದು, ಈ ಮಾರ್ಗದಲ್ಲಿ ಡಿ.20 ರಂದು ಮತ್ತು ನಂತರ ಯಾವುದೇ ದಿನಾಂಕದಂದು ವಿದ್ಯುತ್ ಹಾಯಿಸಲು ಉದ್ದೇಶಿಸಲಾಗಿದೆ.
ಈ ವಿದ್ಯುತ್ ಪ್ರಸರಣ ಮಾರ್ಗವು ಕಾರ್ಕಳ ಸರ್ವಜ್ಞ ವೃತ್ತ, ವೇಣು ಗೋಪಾಲ ದೇವಸ್ಥಾನ, ಕಾಬೆಟ್ಟು ಕ್ರಾಸ್, ಶಿವತಿಕೆರೆ ದೇವಸ್ಥಾನ, ಹಿರಿಯಂಗಡಿ, ಕೃಷ್ಣ ಮಂದಿರದ ಬಳಿ, ಬಾಟಾ ಶೋರೂಮ್, ಭವಾನಿ ಮಿಲ್ ವೃತ್ತ, ಕಾರ್ಕಳ ಬೈಪಾಸ್ ನವೋದಯ ವೃತ್ತ, ಕರಿಯ ಕಲ್ಲು, ರಾಕ್ ಸೈಡ್ ರೆಸ್ಟೋರೆಂಟ್ ಎದರು, ಮಾಧವ ಕ್ಯಾಶ್ಯೂ ಫ್ಯಾಕ್ಟರಿ, ಪವರ್ ಪಾಯಿಂಟ್, ಜೋಡುಕಟ್ಟೆ, ಆದಿಲಕ್ಷ್ಮಿ ಶಿಲ್ಪಕಲಾ(ಕಾಜರಬೈಲು), ಕುಂಟಿಬೈಲು ಜಂಕ್ಷನ್, ಮಿಯಾರು, ಮಸೀದಿ, ಮಿಯಾರು ಚರ್ಚ್, ಕರ್ಮರ್ ಕಟ್ಟೆ ಸೇತುವೆ, ಕರ್ಮರ್ ಕಟ್ಟೆ, ದೇವಿ ಇಂಡಸ್ಟ್ರೀಯಲ್ ಎದರು, ಬಜಗೋಳಿ ಪೆಟ್ರೋಲ್ ಬಂಕ್, ಭುವನೇಶ್ವರಿ ಹೋಟೆಲ್ ಬಜಗೋಳಿ, ದಿಡಿಂಬಿರಿ ಮುಡಾರು ರಸ್ತೆ ಸರಹದ್ದಿನಲ್ಲಿ ಹಾದು ಹೋಗಿದೆ.
ಸದರಿ ವಿದ್ಯುತ್ ಪ್ರಸರಣ ಮಾರ್ಗವು ಹಾದು ಹೋಗುವ ಗ್ರಾಮಗಳ ಪ್ರದೇಶಗಳಲ್ಲಿ ವಾಸಿಸುವವರು ಹಾಗೂ ಇತರರು ಈ ವಿದ್ಯುತ್ ಪ್ರಸರಣ ಮಾರ್ಗದ ಕಂಬ/ಗೋಪುರಗಳನ್ನು ಹತ್ತುವುದಾಗಲಿ, ಇನ್ನಿತರೇ ಉಪಕರಣಗಳನ್ನು ಮುಟ್ಟುವುದಾಗಲೀ ದನಕರುಗಳನ್ನು ಕಟ್ಟುವುದಾಗಲೀ, ಭೂ-ಅಗೆತ ಕಾಮಗಾರಿಗಳನ್ನು ಮಾಡುವುದಾಗಲೀ ಅಥವಾ ವಿದ್ಯುತ್ ಪ್ರಸರಣ ಮಾರ್ಗದ ಕೆಳಭಾಗದಲ್ಲಿ ಯಾವುದೇ ತರಹದ ಚಟುವಟಿಕೆಗಳನ್ನು ಮಾಡಬಾರದಾಗಿ ಈ ಮೂಲಕ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಹಾಗೂ ತಿಳುವಳಿಕೆ ನೀಡಲಾಗಿದೆ, ಸೂಚನೆಗಳನ್ನು ಉಲ್ಲಂಘಿಸಿದರೆ ಅದರಿಂದ ಉಂಟಾಗಬಹುದಾದ ಕಷ್ಟ ನಷ್ಟಗಳಿಗೆ ಅವರುಗಳೇ ಜವಾಬ್ದಾರರಾಗಿರುತ್ತಾರೆ, ಮತ್ತು ಇಂತಹ ನ್ಯಾಯ ಬಾಹಿರ ಚಟುವಟಿಕೆಗಳಿಗೆ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತವು (ಮೆಸ್ಕಾಂ) ಜವಾಬ್ದಾರರಾಗಿರುವುದಿಲ್ಲ ಹಾಗೂ ವಿದ್ಯುಚ್ಚಕ್ತಿ ಕಾಯಿದೆ 2003 ರ ಅನ್ವಯ ಶಿಕ್ಷೆಗೆ ಅರ್ಹರಾಗುತ್ತಾರೆ ಎಂಬುವುದನ್ನು ಸಾರ್ವಜನಿಕರು ಗಮನಿಸಿ, ಮೆಸ್ಕಾಂನೊಂದಿಗೆ ಸಹಕರಿಸುವಂತೆ ಕೋರಲಾಗಿದೆ.