ಮೆಸ್ಕಾಂನಿಂದ ಕಾಮಗಾರಿ: ಸಹಕಾರಕ್ಕೆ ಮನವಿ
ಮಂಗಳೂರು: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ವತಿಯಿಂದ ಮೂಡಬಿದ್ರೆ ಉಪವಿಭಾಗದ ಬೆಳುವಾಯಿ ಶಾಖಾ ವ್ಯಾಪ್ತಿಯ ಶಿರ್ತಾಡಿ ಎಂಬಲ್ಲಿ ಹೊಸದಾಗಿ ನಿರ್ಮಾಣಗೊಂಡ 33/11 ಕೆವಿ ಉಪವಿದ್ಯುತ್ ಕೇಂದ್ರಕ್ಕೆ ವಿದ್ಯುತ್ ಪೂರೈಕೆ ಮಾಡಲು 110/33/11 ಕೆವಿ ಮೂಡಬಿದ್ರೆ ಉಪಕೇಂದ್ರದಿಂದ ಕಾನ, ಬನ್ನಡ್ಕ, ಸುಭಾಷ್ ನಗರ ರಸ್ತೆ ಮೂಲಕ ಕೋಟೆಬಾಗಿಲು ದ್ವಾರದವರೆಗೆ ಭೂಗತ ಕೇಬಲ್, ಕೋಟೆಬಾಗಿಲು ದ್ವಾರದಿಂದ ಹೌದಾಲ್, ಪಡುಕೊಣಾಜೆ ಕುಕ್ಕುದಕಟ್ಟೆ ರಸ್ತೆ ಮೂಲಕ ಶಿರ್ತಾಡಿ ಬಳಿಯ ದಡ್ಡಲ್ ಪಲ್ಕೆ ಸೇತುವೆ ವರೆಗೆ ಓವರ್ ಹೆಡ್ ಮೂಲಕ ಹಾಗೂ ದಡ್ಡಲ್ ಪಲ್ಕೆ ಸೇತುವೆಯಿಂದ 33/11 ಕೆವಿ ಶಿರ್ತಾಡಿ ಉಪಕೇಂದ್ರದವರೆಗೆ 33 ಕೆವಿ ಭೂಗತ ಕೇಬಲ್ ಮೂಲಕ ಮಾರ್ಗವನ್ನು ನಿರ್ಮಿಸಲಾಗಿರುತ್ತದೆ. ಈ ಓವರ್ ಹೆಡ್ ಲೈನ್ ಮತ್ತು ಭೂಗತ ಕೇಬಲನ್ನು ಡಿ.22 ರಂದು ಅಥವಾ ಅನಂತರದ ಯಾವುದೇ ದಿನದಿಂದ ಚಾಲನೆ ಗೊಳಿಸಲು ಉದ್ದೇಶಿಸಲಾಗಿದೆ.
ಸದರಿ ವಿದ್ಯುತ್ ಮಾರ್ಗವು ಹಾದುಹೋಗುವ ಪ್ರದೇಶಗಳಲ್ಲಿ ವಾಸಿಸುವ ಹಾಗೂ ಇತರರು ಈ ವಿದ್ಯುತ್ ಮಾರ್ಗಗಳ ಗೋಪುರಗಳನ್ನು ಹತ್ತುವುದಾಗಲಿ ಹಾಗೂ ಜಾನುವಾರುಗಳನ್ನು ಗೋಪುರಕ್ಕೆ ಕಟ್ಟುವುದಾಗಲಿ ಮಾಡಬಾರದು ಯಾವುದೇ ಕಾಮಗಾರಿ ಕೈಗೊಳ್ಳುವ ಮೊದಲು ಮೆಸ್ಕಾಂ ಅನುಮತಿಯನ್ನು ಪಡೆಯಬೇಕಾಗಿ ಸಾರ್ವಜನಿಕರಿಗೆ/ಸಂಸ್ಥೆಗಳಿಗೆ ತಿಳಿಸಲಾಗಿದೆ.
ಈ ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ಉಂಟಾಗಬಹುದಾದ ಕಷ್ಟ ನಷ್ಟಗಳಿಗೆ ಮತ್ತು ಇಂತಹ ಕಾನೂನು ಬಾಹಿರ ಕಾರ್ಯಚಟುವಟಿಕೆಗಳಿಗೆ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ಜವಾಬ್ದಾರಿಯಾಗಿರುವುದಿಲ್ಲ ಎಂದು ತಿಳಿಯಪಡಿಸಿದೆ. ಸಾರ್ವಜನಿಕರು ಗಮನಿಸಿ, ಮೆಸ್ಕಾಂನೊಂದಿಗೆ ಸಹಕರಿಸುವಂತೆ ಕೋರಲಾಗಿದೆ.