ಅಂತರ್ ಜಿಲ್ಲಾ ಪಥ ಸಂಚಲನ ಹಾಗೂ ಪ್ಲಕ್ ಕಾರ್ಡ್ ಸ್ಪರ್ಧೆ ಕಾರ್ಕಳ ಅರುಣೋದಯ ವಿಶೇಷ ಶಾಲೆಗೆ ಪ್ರಶಸ್ತಿ
Sunday, December 21, 2025
ಕಾರ್ಕಳ: ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ (ರಿ) ಮೂಡಬಿದ್ರೆ, ಇದರ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ನಡೆದ ಅಂತರ್ ಜಿಲ್ಲಾ ಮಟ್ಟದ ಪಥ ಸಂಚಲನ ಹಾಗೂ ಪ್ಲಕ್ ಕಾರ್ಡ್ ಸ್ಪರ್ಧೆಯಲ್ಲಿ ಅರುಣೋದಯ ವಿಶೇಷ ಶಾಲೆಯ ಮಕ್ಕಳು ಭಾಗವಹಿಸಿ ಪ್ರಥಮ ಬಹುಮಾನ ಮತ್ತು ಸಮಾಧಾನಕರ ಬಹುಮಾನ ಪಡೆದಿದ್ದಾರೆ ಮಾತ್ರವಲ್ಲದೆ ಜಾನಪದ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ ವಿಶೇಷ ಶಾಲಾ ಮಕ್ಕಳಿಗೆ ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸಹ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.