ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳದಲ್ಲಿ ಲೇಸರ್ ಶಸ್ತ್ರಚಿಕಿತ್ಸಾ ಶಿಬಿರ
ಕಾರ್ಕಳ: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳದಲ್ಲಿ ಡಿ.22 ರಿಂದ 27, ರವರೆಗೆ, ಬೆಳಗ್ಗೆ 9.30ರಿಂದ 1 ಗಂಟೆಯವರೆಗೆ ಮತ್ತು ಸಂಜೆ 3.30ರಿಂದ 5 ಗಂಟೆಯವರೆಗೆ, ಲೇಸರ್ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಈ ಶಿಬಿರದಲ್ಲಿ ಪೈಲ್ಸ್ (ಹೆಮರಾಯಿಡ್ಸ್), ಗುದ ಭಾಗದ ಸೀಳಿಕೆ, ಬಾವು, (ವೆರಿಕೋಸ್ ವೇನ್ಸ್) ಕಾಲಿನಲ್ಲಿ ಉಬ್ಬಿರುವ ರಕ್ತನಾಳ, ರೋಗಗಳ ತಪಾಸಣೆ ಸಮಾಲೋಚನೆ ಲಭ್ಯವಿರುತ್ತದೆ.
ಈ ಶಿಬಿರದ ಉದ್ದೇಶವು ಕನಿಷ್ಠ ಗಾಯದ ಲೇಸರ್ ಶಸ್ತ್ರಚಿಕಿತ್ಸೆಗಳ ಕುರಿತು ಜಾಗೃತಿ ಮೂಡಿಸುವುದು ಆಗಿದ್ದು, ಇವು ಸಂಪ್ರದಾಯಿಕ ಶಸ್ತ್ರಚಿಕಿತ್ಸೆಯೊಂದಿಗೆ ಹೋಲಿಸಿದರೆ ಕಡಿಮೆ ನೋವು, ಅಲ್ಪ ರಕ್ತಸ್ರಾವ, ಕಡಿಮೆ ಆಸ್ಪತ್ರೆ ವಾಸ ಮತ್ತು ವೇಗವಾಗಿ ಚೇತರಿಕೆ ನೀಡುತ್ತವೆ. ಶಿಬಿರದ ಅವಧಿಯಲ್ಲಿ ಉಚಿತ ಸಮಾಲೋಚನೆ ಒದಗಿಸಲಾಗುತ್ತಿದ್ದು, ಅರ್ಹ ರೋಗಿಗಳಿಗೆ ರಿಯಾಯಿತಿಯ ದರದಲ್ಲಿ ಪರೀಕ್ಷೆಗಳು ಹಾಗೂ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ವೈದ್ಯಕೀಯ ಮೌಲ್ಯಮಾಪನದ ಆಧಾರದ ಮೇಲೆ, ಲೇಸರ್ ಶಸ್ತ್ರಚಿಕಿತ್ಸೆ ಅಗತ್ಯವಿದ್ದಲ್ಲಿ, ಜನವರಿ 2026ರವರೆಗೆ ಮಾನ್ಯವಾಗುವಂತೆ ರಿಯಾಯಿತಿದರದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು.
ಈ ಕುರಿತು ಮಾತನಾಡಿದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮೃಣಾಲ್ ಕುಮಾರ್, ಶಸ್ತ್ರಚಿಕಿತ್ಸೆಯ ಬಗ್ಗೆ ಇರುವ ಭಯದಿಂದ ಅನೇಕ ರೋಗಿಗಳು ಚಿಕಿತ್ಸೆ ವಿಳಂಬಗೊಳಿಸುತ್ತಾರೆ. ಲೇಸರ್ ಶಸ್ತ್ರಚಿಕಿತ್ಸೆಯಿಂದ ಚಿಕಿತ್ಸೆಗಳು ಇನ್ನಷ್ಟು ಸುರಕ್ಷಿತ, ಕಡಿಮೆ ನೋವು ಹಾಗೂ ವೇಗವಾಗಿವೆ. ಈ ಶಿಬಿರದ ಮೂಲಕ ರೋಗಿಗಳಿಗೆ ಜಾಗೃತಿ ಮೂಡಿಸಿ, ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆಯಲು ಪ್ರೋತ್ಸಾಹಿಸುವುದೇ ನಮ್ಮ ಉದ್ದೇಶ ಎಂದರು.
ಈ ಲೇಸರ್ ಶಸ್ತ್ರಚಿಕಿತ್ಸಾ ಶಿಬಿರವು ಗುದ ಭಾಗದಲ್ಲಿ ನೋವು, ರಕ್ತಸ್ರಾವ, ಊತ, ಗುಣವಾಗದ ಗಾಯಗಳು, ಕಾಲಿನ ನೋವು, ಭಾರವಾದ ಅನುಭವ, ಚರ್ಮದ ಬಣ್ಣ ಬದಲಾವಣೆ, ಉಬ್ಬಿರುವ ರಕ್ತನಾಳು ಇತ್ಯಾದಿ ಲಕ್ಷಣಗಳನ್ನು ಹೊಂದಿರುವವರಿಗೆ ವಿನ್ಯಾಸಗೊಳಿಸಲಾಗಿದೆ. ಎರಡನೇ ಅಭಿಪ್ರಾಯ ಅಥವಾ ಲೇಸರ್ ಹಾಗೂ ಕನಿಷ್ಠ ಗಾಯದ ಚಿಕಿತ್ಸೆ ಆಯ್ಕೆಗಳು ಬೇಕಿರುವವರೂ ಭಾಗವಹಿಸಬಹುದು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಮುದಾಯ ಆರೋಗ್ಯ ಬದ್ಧತೆಯನ್ನು ಉಲ್ಲೇಖಿಸಿದ, ಮುಖ್ಯ ವೈದ್ಯಾಧಿಕಾರಿ, ಡಾ. ಕೀರ್ತಿನಾಥ ಬಳ್ಳಾಳ ‘ಈ ಲೇಸರ್ ಶಸ್ತ್ರಚಿಕಿತ್ಸಾ ಶಿಬಿರವು ಆಧುನಿಕ ಹಾಗೂ ಕೈಗೆಟುಕುವ ಆರೋಗ್ಯಸೇವೆಯನ್ನು ಸಮುದಾಯಕ್ಕೆ ತಲುಪಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಆರಂಭಿಕ ರೋಗ ನಿರ್ಣಯ ಮತ್ತು ಸಮಯೋಚಿತ ಚಿಕಿತ್ಸೆಯು ರೋಗಿಗಳ ಫಲಿತಾಂಶವನ್ನು ಬಹಳವಾಗಿ ಸುಧಾರಿಸುತ್ತದೆ’ ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಆಸ್ಪತ್ರೆಯ ಸಹಾಯವಾಣಿಯನ್ನು 9731601150/08258-230583 ಸಂಪರ್ಕಿಸಬಹುದು ಎಂದು ತಿಳಿಸಿದರು.