ಬಸ್‌ಗಳಿಗೆ ಡೋರ್ ಅಳವಡಿಕೆ ಕಡ್ಡಾಯ
Sunday, December 21, 2025
ಉಡುಪಿ: ಜಿಲ್ಲೆಯಾದ್ಯಂತ ಸಂಚರಿಸುವ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ನಿರ್ದೇಶನದಂತೆ ಮೋಟಾರು ವಾಹನ ನಿಯಮಾವಳಿ ಅನ್ವಯ ಡೋಡ್ ಅಳವಡಿಕೆ ಕಡ್ಡಾಯವಾಗಿದೆ. ಆದ್ದರಿಂದ 2026ರ ಜ.20ರೊಳಗಾಗಿ ಕಡ್ಡಾಯವಾಗಿ ಡೋರ್ ಅಳವಡಿಸುವಂತೆ ಡಲ್ಲಾ ಬಸ್ಸುಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.