ಔಷಧಿ ಸಸ್ಯಗಳ ಮೂಲಕ ಆರೋಗ್ಯ ನಿರ್ಮಾಣಕ್ಕೆ ಪಶ್ಚಿಮ ಘಟ್ಟಗಳ ಪಾತ್ರ ಮಹತ್ವದ್ದು: ಕೆ. ಅಮರ್ ನಾರಾಯಣ್

ಔಷಧಿ ಸಸ್ಯಗಳ ಮೂಲಕ ಆರೋಗ್ಯ ನಿರ್ಮಾಣಕ್ಕೆ ಪಶ್ಚಿಮ ಘಟ್ಟಗಳ ಪಾತ್ರ ಮಹತ್ವದ್ದು: ಕೆ. ಅಮರ್ ನಾರಾಯಣ್


ಕೊಣಾಜೆ: ಸಾಂಪ್ರದಾಯಿಕವಾದ ಔಷಧ ಪದ್ದತಿ, ಔಷಧೀಯ ಸಸ್ಯಗಳ ಕುರಿತು ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಅಧ್ಯಯನಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಅನೇಕ ಔಷಧೀಯ ಸಸ್ಯಗಳು ಸಮೃದ್ಧವಾಗಿದ್ದು, ಗಿಡ ಮೂಲಿಕೆಗಳು, ಔಷಧಿ ಸಸ್ಯಗಳ ಮೂಲಕ ಆರೋಗ್ಯ ನಿರ್ಮಾಣಕ್ಕೆ ಪಶ್ಚಿಮ ಘಟ್ಟಗಳ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ಸ್ಟೇಟ್ ಸ್ಯಾಂಡಲ್ ವುಡ್ ಆಂಡ್ ವನಕೃಷಿ ಗ್ರೋವರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರ್ ನಾರಾಯಣ್ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ವತಿಯಿಂದ ಆಳ್ವಾಸ್ ಪಾರಂಪರಿಕ ಔಷಧೀಯ ಸಂಶೋಧನಾ ಕೇಂದ್ರ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮೂಡುಬಿದಿರೆ ಇದರ ಸಹಯೋಗದೊಂದಿಗೆ ‘ಸ್ವಾಸ್ಥ್ಯ ಸಂಪದ-2025’ ಔಷಧೀಯ ಸಸ್ಯಗಳ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಶುಕ್ರವಾರ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ಹಾಗೂ ಕರಾವಳಿ ಪ್ರದೇಶ ಸಮುದ್ರತೀರಗಳು, ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು ಸೇರಿದಂತೆ ವಿವಿಧ ಆಚಾರ ವಿಚಾರಗಳು, ಪ್ರಾಕೃತಿಕ ಸಸ್ಯ ಸಂಪತ್ತುಗಳಲ್ಲಿ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಔಷಧೀಯ ಸಸ್ಯಗಳು, ಪರಿಣಾಮಗಳ ಕುರಿತು ಮಂಗಳೂರು ವಿವಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಿಚಾರ ಸಂಕಿರಣವು ಅನೇಕ ಮಹತ್ವದ ವಿಚಾರಗಳಿಗೆ ವೇದಿಕೆಯಾಗಲಿದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬೆಂಗಳೂರಿನ ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರದ ಸೀನಿಯರ್ ಔಷಧೀಯ ಸಸ್ಯ ತಜ್ಞರಾದ ಡಾ. ಎಂ.ಜೆ. ಪ್ರಭು ಮಾತನಾಡಿ, ಆಯುರ್ವೇದ, ಯೋಗ, ಸಸ್ಯ ಮೂಲಗಳಿಂದ ಬೇರ್ಪಡಿಸುವ ರಾಸಾಯನಿಕ ವಸ್ತುಗಳು, ಸಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳು, ಹೊಸ ರೀತಿಯ ವೈದ್ಯಕೀಯ ಔಷಧಗಳ ತಯಾರಿಕೆಗಳು, ಔಷಧೀಯ ಸಸ್ಯಗಳ ಮಹತ್ವಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ಈ ರಾಷ್ಟ್ರೀಯ ಸಮ್ಮೃಳನವು ಬೆಳಕು ಚೆಲ್ಲಲಿದ್ದು, ಯುವ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ ಎಂದರು.

ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧಗಳನ್ನು ಅರ್ಥೈಸಿಕೊಳ್ಳಬೇಕು. ಇಂದಿನ ಆಧುನಿಕತೆಯ ಹೆಸರಿನಲ್ಲಿ ಅರಣ್ಯ ಸೇರಿದಂತೆ ಪ್ರಾಕೃತಿಕ ಸಂಪತ್ತು ನಾಶವಾಗುತ್ತಿವೆ. ಇದರ ಪರಿಣಾಮ ಹವಮಾನ ವೈಪರೀತ್ಯಗಳುಂಟಾಗುತ್ತಿವೆ ಅನೇಕ ರೋಗ ರುಜಿನಗಳನ್ನು ಜನರನ್ನು ಬಾಧಿಸುವಂತಾಗಿದೆ. ಔಷಧೀಯ ಸಸ್ಯಗಳು, ಅರಣ್ಯ, ಪ್ರಕೃತಿಯ ಸಂರಕ್ಷಣೆಗೆ ಪಣತೊಡಬೇಕಿದೆ. ಪ್ರತಿಯೊಬ್ಬರ ಹುಟ್ಡುಹಬ್ಬವನ್ನು ಗಿಡನೆಡುವ ಮೂಲಕ ಆಚರಿಸುವಂತಾಬೇಕು ಎಂದರು.

ಸಮಾರಂಭದಲ್ಲಿ ಹಿರಿಯ ವಿಜ್ಞಾನಿ ಡಾ. ಸುಲೈಮಾನ್ ಸಿ.ಟಿ., ಆಳ್ವಾಸ್ ಪಾರಂಪರಿಕ ಔಷಧೀಯ ಸಂಶೋಧನಾ ಕೇಂದ್ರದ ನಿರ್ದೆಶಕ ಡಾ. ಸುಬ್ರಹ್ಮಣ್ಯ ಪದ್ಯಾಣ, ಆರ್ಯುವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಸುಶೀಲ್ ಶೆಟ್ಟಿ, ಜೀವ ವಿಜ್ಞಾನ ವಿಭಾಗದ ಅಧ್ಯಕ್ಷೆ ಪ್ರೊ. ತಾರಾವತಿ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರು ವಿವಿ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ. ಎಂ. ಜಯಶಂಕರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿವಿ ಉಪನ್ಯಾಸಕ ಡಾ. ಶರತ್ ಚಂದ್ರ ವಂದಿಸಿದರು. ಶ್ರೇಯಸ್ ಕಾರ್ಯಕ್ರಮ ನಿರೂಪಿಸಿದರು. 

ಸ್ವಾಸ್ಥ್ಯ ಆರೋಗ್ಯಕ್ಕಾಗಿ ಪೂರಕವಾದ ಜೈವಿಕ ಮಜ್ಜಿಗೆ ಕುಡಿಯುವ ಬಗ್ಗೆ ಜಾಗೃತಿ, ಔಷಧೀಯ ಸಸ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article