ಡಿ.21 ರಂದು ಉಚಿತ ಆಯುಷ್ ಚಿಕಿತ್ಸಾ ಶಿಬಿರ
Sunday, December 21, 2025
ಮಂಗಳೂರು: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಡಿ.21 ರಂದು ನಡೆಯಲಿದೆ.
ಈ ಶಿಬಿರವು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಂಗಳೂರಿನ ಉರ್ವ ಸ್ಟೋರ್ ನ ಗಣಪತಿ ದೇವಸ್ಥಾನದ ರಸ್ತೆಯ ಉರ್ವ ಪೊಲೀಸ್ ಸ್ಟೇಷನ್ ಹಿಂಭಾಗವಿರುವ ಬ್ರಹ್ಮಾಕುಮಾರೀಸ್ ನ ವಿಶ್ವಶಾಂತಿ ಮಂದಿರದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಆಯುರ್ವೇದ, ಯೋಗ ಹಾಗೂ ಇತರೆ ಆಯುಷ್ ಪದ್ಧತಿಗಳ ಮೂಲಕ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸಲಹೆಗಳು ನೀಡಲಾಗಲಿವೆ. ಅನುಭವೀ ಆಯುಷ್ ವೈದ್ಯರು ಭಾಗವಹಿಸಿ ಆರೋಗ್ಯ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ನಂ: 9886247272 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.