ಮಂಗಳೂರಿನಲ್ಲಿಯೂ ವಿಮಾನ ಸೇವೆ ವ್ಯತ್ಯಯ

ಮಂಗಳೂರಿನಲ್ಲಿಯೂ ವಿಮಾನ ಸೇವೆ ವ್ಯತ್ಯಯ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲವೊಂದು ಏರ್‌ಲೈನ್ಸ್‌ಗಳು ಪದೇ ಪದೇ ತಾಂತ್ರಿಕ ಕಾರಣವನ್ನು ನೀಡಿ ಪ್ರಯಾಣವನ್ನು ವಿಳಂಬ ಮಾಡುವುದು, ಮುಂದೂಡುವುದು, ರದ್ದು ಮಾಡುವುದು ಮುಂದುವರಿದಿದೆ. ಮಂಗಳೂರಿನಲ್ಲಿಯೂ ಇಂತಹ ವಿದ್ಯಮಾನ ನಡೆದಿದ್ದು, ಮುಂಬಯಿಗೆ ತೆರಳಬೇಕಿದ್ದ ಪ್ರಯಾಣಿಕರು 16.30 ಗಂಟೆ ನಿಲ್ದಾಣದಲ್ಲೇ ಕಾಯಬೇಕಾಯಿತು. ಇಂಡಿಗೋ ವಿಮಾನ ಮಂಗಳೂರಿನಿಂದ ಮುಂಬಯಿಗೆ ಮಂಗಳವಾರ ರಾತ್ರಿ 9.40ಕ್ಕೆ ತೆರಳಬೇಕಿತ್ತು. ಈ ವಿಮಾನದಲ್ಲಿ ಒಟ್ಟು 175 ಮಂದಿ ಪ್ರಯಾಣಿಸುವವರಿದ್ದರು. ಆದರೆ ಈ ವಿಮಾನ ತಾಂತ್ರಿಕ ಕಾರಣದಿಂದ 10.55ಕ್ಕೆ ಹೊರಡಲಿದೆ ಎಂದು ಏರ್ಲೈನ್ಸ್ ಸಿಬ್ಬಂದಿ ಸೂಚನೆ ನೀಡಿದ್ದಾರೆ.

ಆದರೂ ಮರುನಿಗದಿ ಸಮಯ ಆಗಮಿಸಿದರೂ ವಿಮಾನ ಮಾತ್ರ ಹೊರಟಲೇ ಇಲ್ಲ. ಇದಾದ ಬಳಿಕ ಪದೇ ಪದೇ 11.15, 11.45, 12, 1.15, 2ಗಂಟೆ ಸೇರಿದಂತೆ ಸಮಯ ಬದಲಾವಣೆ ಸಂದೇಶ ಹಾಕಿದರು. ವಿಮಾನ ವಿಳಂಬ, ಸಿಬ್ಬಂದಿ ಬೇಜವಾಬ್ದಾರಿಯಿಂದ ಬೇಸತ್ತ ಪ್ರಯಾಣಿಕರು ಏರ್ಲೈನ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದಾದ ಬಳಿಕ ಬದಲಿ ವಿಮಾನಕ್ಕಾಗಿ ವ್ಯವಸ್ಥೆ ಮಾಡಲಾಯಿತು. ಮಂಗಳವಾರ ವಿಮಾನ 9.45ಕ್ಕೆ ಹೊರಡುವುದಾದರೂ ಪ್ರಯಾಣಿಕರು ಒಂದು ಗಂಟೆ ಮುಂಚಿತವಾಗಿ 8.45ಕ್ಕೆ ವಿಮಾನ ನಿಲ್ದಾಣ ತಲುಪಿದ್ದಾರೆ.

ಬುಧವಾರ 1.45ಕ್ಕೆ ವಿಮಾನ ಮಂಗಳೂರಿನಿಂದ ಮುಂಬಯಿಗೆ ಹೊರಟಿದ್ದು, ಮುಂಬಯಿ ವಿಮಾನ ನಿಲ್ದಾಣದಲ್ಲೂ ತಾಂತ್ರಿಕ ಸಮಸ್ಯೆಯಿಂದ ಪ್ರಯಾಣಿಕರು ಚೆಕ್‌ಔಟ್ ಆಗಿ ಮನೆ ತಲುಪುವಾಗ ರಾತ್ರಿ 7.45 ಆಗಿತ್ತು. ಇದರಿಂದ ಪ್ರಯಾಣಿಕರು 2 ಗಂಟೆ ಪ್ರಯಾಣಕ್ಕೆ 24 ಗಂಟೆ ಕಾಯಬೇಕಾಯಿತು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣದಿಂದ ದೇಶ-ವಿದೇಶಕ್ಕೆ ತೆರಳುವ ವಿಮಾನ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಲೇ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತೇನೆ. ಮಂಗಳವಾರ ವಿಮಾನ ರದ್ದು ಆಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ಅಧಿಕಾರಿಗಳ ಜತೆ ಮಾತನಾಡಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ ಸಂಸದ ಕ್ಯಾ.ಬ್ರಿಜೇಶ್ ಚೌಟ.

ತೀವ್ರ ಸಿಬ್ಬಂದಿ ಕೊರತೆ,ಹೊಸ ರೋಸ್ಟರ್ ನಿಯಮಗಳು (ಈಆಖಿಐ ಮಾನದಂಡಗಳು) ಈ ಸಮಸ್ಯೆ ತಲೆದೋರಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article