ಶಬರಿಮಲೆಗೆ ವಿಶೇಷ ರೈಲು

ಶಬರಿಮಲೆಗೆ ವಿಶೇಷ ರೈಲು

ಮಂಗಳೂರು: ಶಬರಿಮಲೆ ಯಾತ್ರಾರ್ಥಿಗಳ ದಟ್ಟಣೆಯ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್ ಮತ್ತು ತಿರುವನಂತಪುರ ನಾರ್ತ್ ನಿಲ್ದಾಣಗಳ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ. ಮಂಗಳೂರು ಜಂಕ್ಷನ್-ತಿರುವನಂತಪುರ ನಾರ್ತ್ ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ (ನಂ. 06041) ರೈಲು ಡಿ.7ರಿಂದ ಜ.18ರ ವರಗೆ ಪ್ರತಿ ರವಿವಾರ ಸಂಜೆ 6ಕ್ಕೆ ಮಂಗಳೂರು ಜಂಕ್ಷನ್‌ನಿಂದ  ಹೊರಟು ಮರುದಿನ ಬೆಳಗ್ಗೆ 6.30ಕ್ಕೆ ತಿರುವನಂತಪುರ ನಾರ್ತ್ ತಲುಪಲಿದೆ.

ಅದೇ ರೀತಿ ತಿರುವನಂತಪುರ ನಾರ್ತ್-ಮಂಗಳೂರು ಜಂಕ್ಷನ್ ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ (ನಂ.06042) ರೈಲು ಡಿ.8ರಿಂದ ಜ.19ರ ವರಗೆ ಪ್ರತಿ ಸೋಮ ವಾರ ಬೆಳಗ್ಗೆ 8.30ಕ್ಕೆ ತಿರುವನಂತಪುರ ನಾರ್ತ್ ನಿಂದ ಹೊರಟು ಅದೇ ದಿನ ರಾತ್ರಿ 8.30ಕ್ಕೆ ಸೆಂಟ್ರಲ್ ತಲುಪಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article