ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ
ಕಾರ್ಯಕ್ರಮವನ್ನು ಗರೋಡಿಯ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಈ ಕಾರ್ಯಕ್ರಮದಲ್ಲಿ ಎಲ್ಲರೂ ಶಿಸ್ತು ಬದ್ಧರಾಗಿರಲು ಧರ್ಮಸ್ಥಳ ಕ್ಷೇತ್ರದ ಒಂದು ಶಕ್ತಿಯೇ ಕಾರಣ ಎಂದರು.
ಇನ್ನೋರ್ವ ಮುಖ್ಯ ಅತಿಥಿ ನಮ್ಮ ಕುಡ್ಲ ಟಿ.ವಿ. ಚಾನೆಲ್‌ನ ನಿರ್ದೇಶಕಿ ಸೌಮ್ಯ ಲೀಲಾಕ್ಷ ಕರ್ಕೇರ್ ಮಾತನಾಡಿ, ಇವತ್ತಿನ ಈ ಕಾರ್ಯಕ್ರಮ ತುಂಬಾ ಸುಂದರವಾಗಿದೆ. ಒಬ್ಬರಿಗೆ ಮಾದರಿ ಮಹಿಳೆ ಆಗಿ ಗುರುತಿಸಬೇಕೆಂದ್ರೆ ಮಹಿಳೆ ಒಂದು ಕ್ಷೇತ್ರದಲ್ಲಿ ಗುರುತುಸಿಕೊಳ್ಳಬೇಕು. ಒಂದು ಗುರು ಬೇಕು ಅದಕ್ಕೆ ಧರ್ಮಸ್ಥಳ ಯೋಜನೆ ಸಾಕ್ಷಿಯಾಗಿದೆ ಎಂದು ಹೇಳಿದರು.
ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸದಸ್ಯೆ ಧನಲಕ್ಷ್ಮಿ ಗಟ್ಟಿ ಮಾತನಾಡಿ ಮಕ್ಕಳನ್ನು ಭವಿಷ್ಯದ ಸಭ್ಯ ನಾಗರಿಕರನ್ನಾಗಿ ರೂಪಿಸುವಲ್ಲಿ ತಾಯಂದಿರ ಪಾತ್ರ ಈ ವಿಷಯದ ಬಗ್ಗೆ ಮಾತನಾಡಿ, ಎಲ್ಲರೂ ತಮ್ಮ ಮಕ್ಕಳ ಬಗ್ಗೆ ವಿಶೇಷವಾಗಿ ಗಮನ ಹರಿಸಿ, ಗಿಡವಾಗಿ ಬಗ್ಗದ್ದು ಮರವನ್ನು ಎಂದೂ ಬಗ್ಗಿಸಲು ಸಾಧ್ಯವಿಲ್ಲ ಎಂಬ ಮಾಹಿತಿಯನ್ನು ಮಹಿಳೆಯರಿಗೆ ವಿಶೇಷವಾಗಿ ಮಾಹಿತಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷೆ ಗೀತಾ ಪ್ರವೀಣ್ ಮಾತನಾಡಿ, ನಾನು ಈ ಒಂದು ಹಂತದಲ್ಲಿ ಬೆಳೆದು ನಿಲ್ಲಬೇಕಾದರೆ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರಣ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುರೇಂದ್ರ ಅವರು ಸ್ವಾಗತಿಸಿ, ಕಾರ್ಯಕ್ರಮದ ಪ್ರಾಸ್ತವಿಕ ಮಾತುಗಳನ್ನಾಡಿದರು.
ಸುಜಾತಾ ಪ್ರಾರ್ಥಿಸಿದರು. ಆಶಾಚಂದ್ರ ಜ್ಞಾನವಿಕಾಸ ಸಮನ್ವಯಧಿಕಾರಿ ನಿರೂಪಿಸಿದರು. ಮಂಗಳೂರು ವಲಯದ ಮೇಲ್ವಿಚಾರಕಿ ಶೋಭಾ ಐ. ವಂದಿಸಿದರು.
