ರಾಷ್ಟ್ರಮಟ್ಟದ ಅಥ್ಲೆಟಿಕ್ಸ್: ಗೊನ್ಝಾಗ ಶಾಲೆಯ ಯುವರಾಜ್‌ಗೆ ಚಿನ್ನದ ಪದಕ
Sunday, December 7, 2025
ಮಂಗಳೂರು: ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ಅವರು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ ರಾಷ್ಟ್ರಮಟ್ಟದ ೬೯ನೇ ನ್ಯಾಶನಲ್ ಸ್ಕೂಲ್ ಗೇಮ್ಸ್ ಅಥ್ಲೆಟಿಕ್ಸ್‌ನಲ್ಲಿ 200 ಮೀ ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಈ ಸ್ಪರ್ಧೆಯು ಡಿ.೧ರಿಂದ ೪ರವರೆಗೆ ಮಧ್ಯಪ್ರದೇಶದ ಇಂದೋರ್‌ನ ಎಮರಾಲ್ಡ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನಡೆಯಿತು. ಈ ಅದ್ಭುತ ಸಾಧನೆಗೆ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರ ಪರವಾಗಿ ಸಂಸ್ಥೆಯ ಪ್ರಿನ್ಸಿಪಾಲ್ ಫಾ. ರೋಹನ್ ಡಿ. ಆಲ್ಮೇಡಾ ಹಾಗೂ ವೈಸ್ ಪ್ರಿನ್ಸಿಪಾಲ್ ಅಪರ್ಣಾ ಸುರೇಶ್, ಲಾರೆನ್ಸ್ ಡಿಸೋಜ, ಯುವರಾಜ್ ಕುಂದರ್ ಪೋಷಕರಾದ ಧೀರಜ್ ಕೋಟ್ಯಾನ್ ಮತ್ತು ವೀಣಾ ಡಿ. ಕೋಟ್ಯಾನ್, ತರಬೇತುದಾರ ಭಕ್ಷಿತ್ ಸಾಲ್ಯಾನ್ ಅಭಿನಂದಿಸಿದ್ದಾರೆ.