ಸಂತ ಆಗ್ನೆಸ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸ್ವಯಂಸೇವಕ ದಿನ
ಯುವನಿಕಾ ಫೌಂಡೇಶನ್ ಮತ್ತು ಹೆಲ್ತ್ ವೋಲಂಟಿಯರ್ಸ್ ಅವರು ಯುನೈಟೆಡ್ ನೇಷನ್ಸ್ ವೋಲಂಟಿಯರ್ಸ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ೧,೨೦೦ಕ್ಕೂ ಹೆಚ್ಚು ಯುವಕರು ಮತ್ತು ಸ್ವಯಂಸೇವಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಯುವ ಮನಸ್ಸುಗಳ ಶಕ್ತಿ ಮತ್ತು ಪರಿವರ್ತನಾ ಶಕ್ತಿಯ ಕುರಿತು ಮಾತನಾಡಿ, ಯುವಕರು ಸ್ವಯಂಸೇವೆಯ ಮೂಲಕ ಹೆಚ್ಚು ಪ್ರಗತಿಶೀಲ ಜಗತ್ತನ್ನು ನಿರ್ಮಿಸುವಂತೆ ತಿಳಿಸಿದರು.
ಸೇಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ವೆನಿಸ್ಸಾ ಎ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ವಿಧಾನ ಪರಿಷತ್ತಿನ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ, ಸ್ವಯಂಸೇವಕ ಚಟುವಟಿಕೆಗಳಲ್ಲಿ ಸಹಾನುಭೂತಿ ಮತ್ತು ಹೊಣೆಗಾರಿಕೆಯ ಮಹತ್ವವನ್ನು ಹೇಳಿದರು.
ಮಂಗಳೂರು ಸಹಾಯಕ ಪೊಲೀಸ್ ಆಯುಕ್ತೆ ಮೀನಾಕ್ಷಿ ಆರ್ಯಾ, ಎಮ್. ಜೈಕಿಶನ್ ಭಟ್ ಸ್ವಯಂಸೇವಕತೆಯ ಮಹತ್ವದ ಕುರಿತು ಪರಿಣಾಮಕಾರಿ ಸಂದೇಶಗಳನ್ನು ಹಂಚಿಕೊಂಡರು.
ನಿರ್ದೇಶಕ ರಿಷಿ ಬಾನ್ಸಿವಾಲ್ ಮಾತನಾಡಿ, ಪ್ರತಿಯೊಂದು ಕೊಡುಗೆ ಮುಖ್ಯ. ಯುವ ನಾಯಕರು ವಿಶಾಲ ಮಟ್ಟದ ಸ್ವಯಂಸೇವಕ ಚಟುವಟಿಕೆಯ ಪ್ರೇರಕ ಎಂದು ಹೇಳಿದರು.
ಯುವನಿಕಾ ಫೌಂಡೇಶನ್‌ನ ರಘುವೀರ್ ಮತ್ತು ಸೇಂಟ್ ಆಗ್ನೆಸ್ ಕಾಲೇಜಿನ ಕಾರ್ಯಕ್ರಮ ಸಂಯೋಜಕಿ ಗಾಯತ್ರಿ ಬಿ.ಕೆ. ಉಪಸ್ಥಿತರಿದ್ದರು.