ಮೂಡುಬಿದಿರೆ:`ನಮ್ಮ ಮತ ನಮ್ಮ ಹಕ್ಕು' ಮತದಾನ ಗುರುತಿನ ಚೀಟಿ ಅಭಿಯಾನ
Sunday, December 7, 2025
ಮೂಡುಬಿದಿರೆ: ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ಮಂಗಳೂರು) ಮತ್ತು ಛಾಯಾ ಗ್ರಾಮ ವನ್ ಸೇವಾ ಕೇಂದ್ರ ಇವುಗಳ ಸಹಯೋಗದೊಂದಿಗೆ ಆಯೋಜಿಸಲಾದ 'ನಮ್ಮ ಮತ ನಮ್ಮ ಹಕ್ಕು' ಮತದಾನ ಗುರುತಿನ ಚೀಟಿ ಅಭಿಯಾನವು ಮೂಡುಬಿದಿರೆ ಗ್ಯಾರಂಟಿ ಅಧ್ಯಕ್ಷರ ಕಚೇರಿಯಲ್ಲಿ ಭಾನುವಾರ ನಡೆಯಿತು.
ಪುರಸಭಾ ಹಿರಿಯ ಸದಸ್ಯರಾದ ಕೊರಗಪ್ಪ ಅವರು ಅಭಿಯಾನಕ್ಕೆ ಚಾಲನೆಯನ್ನು ನೀಡಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ಭರತ್ ಮುಂಡೊಡಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪುರಸಭಾ ಸದಸ್ಯರಾದ ಪಿ.ಕೆ. ಥೋಮಸ್, ಅಭಿನಂದನ್ ಬಳ್ಳಾಳ್ ಮತ್ತು ಪುರಸಭಾ ಸದಸ್ಯರಾದ ಅಬ್ದುಲ್ ಕರೀಂ, ಜೆಸ್ಸಿ ಮೆನೇಜಸ್, ಸಂತೋಷ್ ಶೆಟ್ಟಿ, ಸುರೇಶ್ ಕೋಟ್ಯಾನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾತ್ಯಾಯಿನಿ, ಗ್ಯಾರಂಟಿ ಅನುಷ್ಠಾನದ ತಾಲುಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸದಸ್ಯರಾದ ಶಕುಂತಲಾ, ರಜನಿ, ಹರೀಶ್ ಆಚಾರ್ಯ, ಶೌಕತ್ ಆಲಿ, ರೆಕ್ಸಾನ್, ಪುರುಷೋತ್ತಮ್ ನಾಯಕ್, ಪ್ರಭಾಕರ್ ದರಗುಡ್ಡೆ, ಅಸ್ಲಾಂ ಪಡುಮಾರ್ನಾಡು ಉಪಸ್ಥಿತರಿದ್ದರು.
ಅಭಿಯಾನದಲ್ಲಿ ಸುಮಾರು 250 ಮಂದಿ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಂಡರು. ಸಾರ್ವಜನಿಕರು ಹೊಸ ಮತದಾರರ ಗುರುತಿನ ಚೀಟಿ ನೋಂದಣಿ, ತಿದ್ದುಪಡಿ, ಸೇರ್ಪಡೆ ಮುಂತಾದ ಪ್ರಯೋಜನಗಳನ್ನು ಪಡೆದುಕೊಂಡರು.
ರಮೇಶ್ ಶೆಟ್ಟಿ ಮಾರ್ನಾಡು ಸ್ವಾಗತಿಸಿದರು. ಛಾಯಾ ಸೇವಾ ಕೇಂದ್ರದ ಪ್ರಿಯ ಶೆಟ್ಟಿ, ರಕ್ಷಿತಾ, ಬುಶ್ರ, ಅನುಷಾ ಅಭಿಯಾನದ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಹಕರಿಸಿದರು.
