ಸುಪರ್ಣ ಎನ್. ಅವರಿಗೆ ಪಿಹೆಚ್‌ಡಿ ಪದವಿ
Friday, December 5, 2025
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಸುಪರ್ಣ ಎನ್. ಅವರಿಗೆ ‘ಐಒಟಿ ಆಧಾರಿತ ಸುರಕ್ಷಿತ ಸ್ಮಾರ್ಟ್ ಹೋಮ್ ಸಿಸ್ಟಮ್‌ನ ಕಾರ್ಯಕ್ಷಮತೆ ವಿಶ್ಲೇಷಣೆ’ ಎಂಬ ಮಹಾ ಪ್ರಬಂಧಕ್ಕೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪದವಿಯನ್ನು ನೀಡಿದೆ.
ಇವರು ಕಾರ್‌ಸ್ಟ್ರೀಟ್‌ನ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಮಂಜಯ್ಯ ಡಿ.ಎಚ್. ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ.