ಡಿ.7 ರಂದು ಮೂಡುಬಿದಿರೆಯಲ್ಲಿ ಗ್ಯಾರಂಟಿ ಸಮಿತಿ ವತಿಯಿಂದ ಮತದಾನ ಗುರುತಿನ ಚೀಟಿ ಅಭಿಯಾನ
Friday, December 5, 2025
ಮೂಡುಬಿದಿರೆ: ಮೂಡುಬಿದಿರೆ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಛಾಯಾ ಗ್ರಾಮ ಒನ್ ಸೇವಾ ಕೇಂದ್ರದ ಸಹಕಾರದಲ್ಲಿ ಮತದಾನ ಗುರುತಿನ ಚೀಟಿ ಅಭಿಯಾನವು ಡಿ.7 ಭಾನುವಾರ ಮೂಡುಬಿದಿರೆ ನಾಡಕಚೇರಿ ಬಳಿಯ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಕಚೇರಿಯಲ್ಲಿ ನಡೆಯಲಿದೆ ಎಂದು ಸಮಿತಿಯ ಆದ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.
ಹೊಸ ಮತದಾನ ಗುರುತಿನ ಚೀಟಿ, ತಿದ್ದುಪಡಿ, ಹಳೆಯ ಮತದಾನ ಗುರುತಿನ ಚೀಟಿ ತಿದ್ದುಪಡಿ ಹಾಗೂ ನವೀಕರಣವನ್ನು ಈ ಅಭಿಯಾನದಲ್ಲಿ ಮಾಡಿಕೊಡಲಾಗುತ್ತದೆ, ಈ ಅಭಿಯಾನಕ್ಕೆ ಬರುವವರು ಆಧಾರ್ ಕಾರ್ಡ್, ಹಳೆಯ ಮತದಾನ ಗುರುತಿನ ಚೀಟಿ, ಪಾಸ್‌ಪೋರ್ಟ್ ಸೈಝಿನ ಫೊಟೊ ಹಾಗೂ ಮೊಬೈಲ್ ತರಬೇಕೆಂದು ಅವರು ತಿಳಿಸಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಮಾಜಿ ಸಚಿವರಾದ ಕೆ.ಅಭಯಚಂದ್ರ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಅರುಣ್ ಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.