ವಿಶೇಷ ಚೇತನರಿಗೆ ಸೌಲಭ್ಯಗಳನ್ನು ಒದಗಿಸುವುದು ಸಮಾಜ ಮತ್ತು ಸರಕಾರದ ಕತ೯ವ್ಯ
ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಪರಿಸರ ನಿಮಾ೯ಣ ಕಾಯ೯ಕ್ರಮದ ಬಗ್ಗೆ ಮಾತನಾಡಿದರು.
ಸನ್ಮಾನ: ವಿಶೇಷ ಚೇತನ ಸಾಧಕ ವಿದ್ಯಾಥಿ೯ಗಳಾದ ಎಕ್ಸಲೆಂಟ್‌ನ ಯಶ್ವಿತ್ ಮತ್ತು ಆಳ್ವಾಸ್‌ನ ಕೌಶಿಕ್ ಅವರನ್ನು ಸನ್ಮಾನಿಸಲಾಯಿತು.
ನಗರ ಪುನವ೯ಸತಿ ಕಾಯ೯ಕತೆ೯ ಸವಿತಾ, ಗ್ರಾಮೀಣ ಪುನವ೯ಸತಿ ಕಾಯ೯ಕತೆ೯ಯರಾದ ಪ್ರಿಯಾಂಕ, ವನಿತಾ, ಆಕಾಶ್ ಆಚಾರ್ಯ, ಸತೀಶ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಆರೋಗ್ಯ ನಿರೀಕ್ಷಕ ಖಾದರ್ ಎನ್., ಪ್ರಾಂತ್ಯ ಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರ, ಅಲಂಗಾರು ಲಯನ್ಸ್ ಕ್ಲಬ್‌ನ ಕಾಯ೯ದಶಿ೯ ರಿಚಾಡ್೯ ಡಿ’ಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ಷೇತ್ರ ಸಮನ್ವಯಾಧಿಕಾರಿ ಸೌಮ್ಯಾ ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಾಂತ್ಯ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಚಂದ್ರ ಅಂಬೂರಿ ಕಾಯ೯ಕ್ರಮ ನಿರೂಪಿಸರು. ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕಿ ಫ್ಲೇವಿ ಡಿ’ಸೋಜಾ ವಂದಿಸಿದರು.
ಸಭಾ ಕಾಯ೯ಕ್ರಮದ ನಂತರ ವಿಶೇಷ ಚೇತನರ ಪೋಷಕರಿಗೆ ಮತ್ತು ಅಂಗನವಾಡಿ ಕಾಯ೯ಕತೆ೯ಯರಿಗೆ ಜಾಗೃತಿ ಮತ್ತು ಅರಿವು ಕಾಯಾ೯ಗಾರ ನಡೆಯಿತು.


