ತೆಂಕಮಿಜಾರು ಪಂಚಾಯತ್ ಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕೊಡುಗೆ
Friday, December 5, 2025
ಮೂಡುಬಿದಿರೆ: ಪ್ರೊವಿಟ್ ಫುಡ್ ಪ್ರೈವೆಟ್ ಲಿಮಿಟೆಡ್ ನ ವಿನ್ಸೆಂಟ್ ಕುಟಿನ್ಹ ಅವರು ತೆಂಕಮಿಜಾರು ಗ್ರಾಮ ಪಂಚಾಯತ್ ಕಛೇರಿಗೆ ವಾಟರ್ ಪ್ಯೂರಿಫೈಯರ್ ಹಾಗೂ ಪಂಚಾಯತ್ ಕಚೇರಿ ಉಪಯೋಗಕ್ಕೆ ಹೊಸ ಲ್ಯಾಪ್ ಟಾಪ್ ನ್ನು ಶುಕ್ರವಾರ ಕೊಡುಗೆ ಯಾಗಿ ನೀಡಿದರು.
ಪಂಚಾಯತ್ ಗೆ ಬರುವ ಸಾವ೯ಜನಿಕರಿಗೆ ಕುಡಿಯುವ ನೀರಿನ ಅವಶ್ಯಕತೆಯಿರುತ್ತದೆ ಈ ನಿಟ್ಟಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದ ಅವರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ ಅವರ ಸಾರ್ವಜನಿಕ ಕಳಕಳಿ ಹಾಗೂ ಸೇವೆಗೆ ಅಭಿನಂದಿಸಿದರು.
ಪಂಚಾಯತ್ ಗೆ ಕೊಡುಗೆ ನೀಡಿರುವ ದಾನಿಯನ್ನು ಪಂಚಾಯತ್ ಪರವಾಗಿ ಗೌರವಿಸಲಾಯಿತು.
ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಬಿ. ಮತ್ತು ಸಿಬಂಧಿಗಳು ಈ ಸಂದಭ೯ದಲ್ಲಿದ್ದರು.

